News @ your fingertips
News @ your fingertips
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಜುಟೆಕ್ ಕಂಪೆನಿ ಬೈಜುಸ್ ತನ್ನ ಸಂಸ್ಥೆಯ ಮಾರುಕಟ್ಟೆ ವಿಭಾಗದ ಸಿಬಂದಿಗಳನ್ನು ಹೊರತು ಪಡಿಸಿ,ಉಳಿದೆಲ್ಲರಿಗೆ ಎಪ್ರಿಲ್ ತಿಂಗಳ ವೇತನ ಪಾವತಿಸಿದೆ.
ಕಳೆದ ಹಲವು ತಿಂಗಳಿಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ ತನ್ನ ಸಿಬಂದಿಗಳಿಗೆ ವೇತನ ನೀಡಲು ಸಹ ಹರಸಾಹಸ ಮಾಡುತ್ತಿದೆ.
ಆರ್ಥಿಕ ವಿಚಾರದಲ್ಲಿ ಖಾಸಗಿ ವಿತ್ತೀಯ ಸಂಸ್ಥೆಗಳು ಹಾಗೂ ಇತರರು ಹೂಡಿರುವ ದೂರುಗಳ ಕುರಿತು ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ.
ಬೈಜುಸ್ ಎಜುಟೆಕ್ ಕ್ಷೇತ್ರದಲ್ಲಿ ಅತ್ಯಂತ ಕ್ಷಿಪ್ರವಾಗಿ ಪ್ರಗತಿಯನ್ನು ಕಂಡ ಕಂಪೆನಿ. ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ವಿವಿಧ ಸೇವೆಯನ್ನು ಈ ಕಂಪೆನಿ ಮೂಲಕ ಪಡೆಯುತ್ತಿದ್ದರು.
ಕಂಪೆನಿಯಲ್ಲಿ ಸುಮಾರು 12000 ಸಿಬಂದಿಗಳಿದ್ದು, ಅವರಲ್ಲಿ 4 ಸಾವಿರ ಮಾರುಕಟ್ಟೆ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
ಕಂಪೆನಿಯ ಪ್ರವರ್ತಕರಾದ ಬೈಜು ರವೀಂದ್ರನ್ ಅವರು ಖಾಸಗಿ ಸಾಲದ ಮೂಲಕ ವೇತನವನ್ನು ಸರಿದೂಗಿಸಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
More Stories
ವಿಮಾನ ನಿಲ್ದಾಣ ಲೋಪಗಳ ಮೇಲೆ ಕಣ್ಗಾವಲು
ಬಿರ್ಲಾ ಫ್ಯಾಷನ್ನಿಂದ ಫ್ಲಿಫ್ ಕಾರ್ಟ್ ಹೊರಗೆ
ಪಾಕ್ನಲ್ಲಿ ಭೂಕಂಪ ಕೈದಿಗಳ ಪರಾರಿ