7 rupees

News @ your fingertips

ಚಿನ್ನಾಭರಣ ವಹಿವಾಟು ಹೆಚ್ಚುವ ನಿರೀಕ್ಷೆ

ಚಿನ್ನಾಭರಣ ವಹಿವಾಟು ಹೆಚ್ಚುವ ನಿರೀಕ್ಷೆ

ಈ ವರ್ಷದ ಅಕ್ಷಯ ತೃತೀಯದ ಹೊತ್ತಿಗೆ ಚಿನ್ನಾಭರಣಗಳ ವ್ಯವಹಾರದಲ್ಲಿ ದೊಡ್ಡ ಮಟ್ಟಿಗೆ ಏರಿಕೆ ೆ ಕಾಣಲಿದೆ ಎಂದು ಉದ್ಯಮದಾರರು ನಿರೀಕ್ಷೆಯಲ್ಲಿದ್ದಾರೆ. ಸದ್ಯ ತಣ್ಣಾಗಿರುವ ಚಿನ್ನ ವಹಿವಾಟು ಮೇ.10ರ ಅಕ್ಷಯ ತೃತೀಯ ಹೊತ್ತಿಗೆ ದೊಡ್ಡ ಬ್ರೇಕ್ ಪಡೆಯಲಿದೆ ಎನ್ನುವ ಅಶಾವಾದ ಅವರದ್ದು.ಸದ್ಯ ಬೇರೆ ಬೇರೆ ಕಾರಣದಿಂದ ಚಿನ್ನಾಭರಣ ಉದ್ಯಮದಲ್ಲಿ ನಿರೀಕ್ಷಿತ ಬೆಳವಣಿಗೆ ಕಾಣುತ್ತಿಲ್ಲ. ಇತ್ತೀಚಿಗೆ ಚಿನ್ನದ ಬೆಲೆ ಅಲ್ಪ ಮಟ್ಟದಲ್ಲಿ ಏರಿಕೆಯಾಗಿರುವುದು ಸಹಜವಾಗಿ ಮಾರಾಟದ ಮೇಲೆ ಪರಿಣಾಮ ಬೀರಿದೆ. ಅದರ ಜೊತೆಯಲ್ಲಿ ಕಳೆದೊಂದು ತಿಂಗಳಲಲ್ಲಿ ಮದುವೆ ಹಾಗೂ ಇತರ ಶುಭ ಕಾರ್ಯಕ್ರಮಗಳಿಗೆ ಮುತೂರ್ಹಗಳು ಇಲ್ಲದಿರುವ ಕಾರಣ ವಹಿವಾಟಿನಲ್ಲಿ ಹಿನ್ನಡೆಯಾಗಿದೆ. ಈ ನಡುವೆ ಲೋಕಸಭೆ ಚುನಾವಣೆಗಳು ಪ್ರಕಟಗೊಂಡಿವೆ.ಈ ವರ್ಷ ಚಿನ್ನದ ಬೆಲೆ 62000 ರೂ. ( 10 ಗ್ರಾಮ್ )ಗಳಿಂದ 67 ಸಾವಿರ ರೂ.ಗಳಿಗೆ ಏರಿದೆ. ಸದ್ಯ 66930 ರೂ.ಗಳಲ್ಲಿ ವಹಿವಾಟು ನಡೆಯುತ್ತಿದೆ.ಅಮರಿಕದ ಬಡ್ಡಿ ದರ ಪರಿಷ್ಕರಣೆ ಸುದ್ದಿಗಳು , ರಷ್ಯಾ- ಯುಕ್ರೇನ್ ಯುದ್ದ , ಇಸ್ರೇಲ್ – ಹಮಾಸ್ ಸಂಘರ್ಷ , ಅಮರಿಕ ಅಧ್ಯಕ್ಷೀಯ ಚುನಾವಣೆ ಹೀಗೆ ಹಲವು ಅಂತಾರಾಷ್ಟ್ರೀಯ ವಿದ್ಯಮಾನಗಳು ಕೂಡಾ ಚಿನ್ನದ ಬೆಲೆಯೇರಿಕೆಗೆ ಕಾರಣವಾಗಿದೆ. ಸದ್ಯ ಪರಿಸ್ಥಿತಿ ತಿಳಿಯಿದ್ದರೂ , ದೊಡ್ಡ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣಗಳಿಲ್ಲ.
ಚಿನ್ನದ ಬೆಲೆ ಏರಿಕೆಯಾದರೂ , ಭಾರತೀಯ ಗ್ರಾಹಕರು ಅಕ್ಷಯ ತೃತೀಯ , ಧನ್ ತೆರಸ್ ದಿನದಂದು ಚಿನ್ನ ಖರೀದಿಸುವುದನ್ನು ತಪ್ಪಿಸುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ಖರೀದಿಯಲ್ಲಿ ಹೆಚ್ಚಿನ ಉತ್ಸಾಹವನ್ನು ನಿರೀಕ್ಷಿಸಲಾಗಿದೆ ಎನ್ನುವುದು ಮುಂಬೈ ಚಿನ್ನ ವ್ಯಾಪಾರಿಗಳ ನಂಬಿಕೆ,ಕಳೆದ ಕೆಲವು ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿನ ಕುಸಿತ , ಅನಿಶ್ಚಿತತೆ ಹೂಡಿಕೆದಾರರನ್ನು ಚಿನ್ನ ಖರೀದಿಯತ್ತ ಮುಖ ಮಾಡಿಸಿದರೂ ಅಶ್ಚರ್ಯವಿಲ್ಲ.ಅಮರಿಕಾದ ಬಡ್ಡಿದರ ಕಡಿಮೆಯಾದರೆ , ಚಿನ್ನದ ಖರೀದಿಗೆ ಒತ್ತು ಸಿಗಲಿದೆ. ಆದರೆ ಸದ್ಯಕ್ಕಂತೂ ಅದು ದೂರದ ಮಾತು.

× Subscribe us