News @ your fingertips
News @ your fingertips
ಮಲಯಾಳಂ ಚಿತ್ರರಂಗದ ಯಾವುದೇ ಅಧಿಕಾರ ಗುಂಪಿನ ಭಾಗ ತಾನಾಗಿಲ್ಲ ,ಚಿತ್ರರಂಗದಲ್ಲಿ ಅಂತಹ ಅಧಿಕಾರ ಗುಂಪಿಗಳಿವೆ ಎನ್ನುವ ವಿಚಾರವೂ ತನಗೆ ತಿಳಿದಿಲ್ಲ ಎಂದು ನಟ ಮೋಹನ್‌ಲಾಲ್ ಶನಿವಾರ ಹೇಳಿದರು.
ಮಲಯಾಳಂ ಸಿನಿಮಾ ರಂಗ ಅತಿ ದೊಡ್ಡ ಉದ್ಯಮವಾಗಿದೆ. ಸಾವಿರಾರು ಕಲಾವಿದರು , ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳಿಗೆ ಕಲಾವಿದರ ಸಂಘ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂದು ಅವರು ವಿಷಾದಿಸಿದರು.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪಗಳು , ವಿವಾದ ಎದ್ದಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಮಾತನಾಡಿರುವ ಮೋಹನ್‌ಲಾಲ್, ಮೊನ್ನೆ ತನಕ ಮಲಯಾಳಂ ಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ಲೈಂಗಿಕ ಕಿರುಕುಳ ಕುರಿತಂತೆ ಚಿತ್ರನಟಿಯರಿಂದ ದೂರುಗಳು ದಾಖಲಾಗುತ್ತಿದ್ದಂತೆ , ಅಧ್ಯಕ್ಷ ಪದಕ್ಕೆ ರಾಜೀನಾಮೆ ನೀಡಿ , ಆಡಳಿತ ಸಮಿತಿಯನ್ನು ವಿಸರ್ಜಿಸಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕುರಿತಂತೆ ಜಸ್ಟಿಸ್ ಹೇಮ ಆಯೋಗ ಸಲ್ಲಿಸಿರುವ ವರದಿಯನ್ನು ಸ್ವಾಗತಿಸಿರುವ ಮೋಹನ್‌ಲಾಲ್ ಸರಕಾರ ಉತ್ತಮ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಪ್ರಶಂಸಿದರು.
More Stories