7 rupees

News @ your fingertips

ಮಂಗಳೂರು ಐಸ್‌ಕ್ರೀಮ್ ಕ್ಯಾಪಿಟಲ್‌ನಲ್ಲಿ ಏನಿದೆ ?

ಮಂಗಳೂರು ಐಸ್‌ಕ್ರೀಮ್ ಕ್ಯಾಪಿಟಲ್‌ನಲ್ಲಿ ಏನಿದೆ ?

ನಿಮಗೆ ಗೊತ್ತಾ ?
ಮಂಗಳೂರನ್ನು ಐಸ್‌ಕ್ರೀಮ್ ರಾಜಧಾನಿ ಅನ್ನುತ್ತಾರೆ.
ಯಾಕೆ ಮಂಗಳೂರು ಐಸ್‌ಕ್ರೀಮ್ ರಾಜಧಾನಿಯಾಗಿದೆ ಎನ್ನುವುದು ಆಶ್ಚರ್ಯಕರ ವಿಚಾರ.
ಕಡಲು ತೀರದ ಉಡುಪಿ ಹಾಗೂ ಮಂಗಳೂರಿನಲ್ಲಿ ಐಸ್‌ಕ್ರೀಮ್ ಪ್ರಿಯರ ಸಂಖ್ಯೆ ಅಧಿಕ . ಮಳೆಗಾಲ , ಚಳಿಗಾಲ ಎನ್ನದೇ ವರ್ಷವಿಡಿ ಈ ಭಾಗದಲ್ಲಿ ಐಸ್‌ಕೀಮ್ ಸೇವನೆ ಮಾಡುತ್ತಾರೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಭರ್ಜರಿ ವಹಿವಾಟು.
ಈ ಪ್ರದೇಶದಲ್ಲಿ ಲಭ್ಯವಾಗುವ ಐಸ್‌ಕ್ರೀಮ್ ವೈರಟಿಗಳು ದೇಶದ ಯಾವ ಭಾಗದಲ್ಲೂ ಸಿಗಲಾರದು. ಕೇವಲ ವೈರಟಿ ಮಾತ್ರವಲ್ಲ , ಸ್ವಾದಿಷ್ಟದಲ್ಲೂ ಇಲ್ಲಿನ ಐಸ್‌ಕ್ರೀಮ್‌ಗಳು ಮೇಲುಗೈ ಪಡೆದಿವೆ.
ಸ್ಥಳೀಯ ಅಭಿರುಚಿಗೆ ತಕ್ಕದಾಗಿ , ಶುಚಿರುಚಿಗೆ ಹೆಚ್ಚಿನ ಅದ್ಯತೆ ನೀಡುವ ಕಾರಣ ಅವುಗಳು ಗ್ರಾಹಕರಿಗೆ ಅಚ್ಚುಮೆಚ್ಚು ಕೂಡಾ.
ಮಂಗಳೂರು ಹೇಳಿ ಕೇಳಿ ಪುಡ್ ಪ್ರಿಯರ ತಾಣ. ಇಲ್ಲಿನ ಹಲವಾರು ಖಾದ್ಯಗಳು ಕೂಡಾ ದೇಶ ವಿದೇಶಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಮುಖ್ಯವಾಗಿ ಐಡಿಯಲ್ , ಹಾಂಗ್ಯೋ , ನ್ಯಾಚುರಲ್ ಐಸ್‌ಕ್ರೀಮ್ ಮಂಗಳೂರಿನ ಜನಪ್ರಿಯ ಐಸ್‌ಕ್ರೀಮ್‌ಗಳು . ದೀಗ ಹೊರ ರಾಜ್ಯದ ಹಲವಾರು ಬ್ರಾಂಡ್‌ಗಳು ಮಂಗಳೂರು ನಗರಕ್ಕೆ ಲಗ್ಕೆ ಇಡುತ್ತಿವೆ. ಅದರೆ ಸ್ಥಳೀಯ ಬ್ರಾಂಡ್‌ಗಳಿಗೆ ಯಾವುದೇ ಸವಾಲು ಒಡ್ಡಲು ಸಾಧ್ಯವಾಗಿಲ್ಲ. ಇಲ್ಲಿನ ಪ್ರತಿಯೊಂದು ಬ್ರಾಂಡ್‌ಗಳು ಹತ್ತು ಹಲವು ವೈರಟಿಯ ಐಸ್‌ಕ್ರೀಮ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದೇ ಮಾರುಕಟ್ಟೆ ಗೆಲ್ಲಲು ಮೂಲ ಕಾರಣ.
ವಿವಿಧ ಬಗೆಯ ಹಣ್ಣುಗಳನ್ನು , ಡ್ರೈಪುಡ್‌ಗಳನ್ನು ಬಳಸಿ ಐಸ್‌ಕ್ರೀಮ್‌ಗಳನ್ನು ತಯಾರಿಸುವುದು ಇಲ್ಲಿನ ವೈಶಿಷ್ಟೃ. ಐಸ್‌ಕ್ರೀಮ್ ತಯರಿಕೆಯಲ್ಲಿ ಹೊಸತನ ತೋರುತ್ತಿರುವುದು , ಜನರ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಉತ್ಪನ್ನಗಳನ್ನು ನಿರಂತರವಾಗಿ ನೀಡುತ್ತಿರುವುದು ಕೂಡಾ ಯಶಸ್ವಿಗೆ ಕಾರಣ.
ಐಸ್‌ಕ್ರೀಮ್ ತಯಾರಿಕೆಯಲ್ಲಿ ಬಹುದೊಡ್ಡ ಕಂಪೆನಿಗಳಿವೆ. ಅಮೂಲ್ , ವಾಡಿಲಾಲ್ , ಕ್ವಾಲಿಟಿ ವಾಲ್ , ಮದರ್ ಡೇರಿ … ಮುಂತಾದ ಖ್ಯಾತನಾಮರು ಮಾರುಕಟ್ಟೆಯಲ್ಲಿದ್ದರೂ , ಕರಾವಳಿ ಭಾಗದಲ್ಲಿ ನಮ್ಮವರೇ ಲೀಡರ್ಸ್‌. ಐಡಿಯಲ್ , ಹಾಂಗ್ಯೋ , ನ್ಯಾಚುರಲ್ಸ್ ಜೊತೆಯಲ್ಲಿ ಹತ್ತಾರು ಸಣ್ಣಪುಟ್ಟ ಐಸ್‌ಕ್ರೀಮ್ ಬ್ರಾಂಡ್‌ಗಳಿವೆ. ಊರ ಉತ್ಸವ , ಜಾತ್ರೆಗಳಲ್ಲಿ ಮಾತ್ರ ಅವರದ್ದೇ ಕಾರುಬಾರು. ಲೋಕಲ್ ಐಸ್‌ಕ್ಯಾಂಡಿ , ಐಸ್‌ಕ್ರೀಮ್‌ಗಳಿಗೆ ಜನರ ಬೆಂಬಲ.

× Subscribe us