7 rupees

News @ your fingertips

ಬೇಡಿಕೆ ಪಡೆದ ಹೊಟೇಲ್ ಉದ್ಯಮ ಈ ಷೇರುಗಳ ಬಗ್ಗೆ ಗಮನ ಇರಲಿ

ಬೇಡಿಕೆ ಪಡೆದ ಹೊಟೇಲ್ ಉದ್ಯಮ ಈ ಷೇರುಗಳ ಬಗ್ಗೆ ಗಮನ ಇರಲಿ

ಭಾರತದಲ್ಲಿ ಪ್ರವಾಸೋದ್ಯಮ ಹೆಚ್ಚಿನ ಒತ್ತು ಪಡೆಯುತ್ತಿದ್ದಂತೆ , ಅಂತಾರಾಷ್ಟೀಯ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗ ತೊಡಗಿದೆ. ಇದು ನೇರವಾಗಿ ಹಲವು ಉದ್ಯಮಗಳಿಗೆ ಅನುಕೂಲಕರವಾಗಿ ಪರಿಗಣಿಸಿದೆ.ಪ್ರವಾಸಿಗರ ಪ್ರಮಾಣ ಹೆಚ್ಚುತ್ತಿದ್ದಂತೆ ಗರಿಷ್ಟ ಲಾಭವಾಗಿರುವುದು ಹೋಟೇಲ್ ಉದ್ಯಮಕ್ಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ ಹೋಟೇಲ್ ಉದ್ಯಮ ಶೇ.10ರಷ್ಟು ಹೆಚ್ಚು ಬೆಳವಣಿಗೆಯನ್ನು ಕಂಡಿದೆ ಎನ್ನುತ್ತವೆ ವರದಿಗಳು. ಇದರ ಪರಿಣಾಮವಾಗಿ ಇಂಡಿಯನ್ ಹೊಟೇಲ್ಸ್ ಕಂ , ಲೇಮನ್ ಟ್ರೀ ಹೊಟೇಲ್ಸ್ ಸೇರಿದಂತೆ ಬಹಳಷ್ಟು ಹೊಟೇಲ್ ಉದ್ಯಮಗಳ ಷೇರುಗಳು ಸುಮಾರು ಶೇ.75 ರಿಂದ 125 ವರೆಗೆ ಗಳಿಕೆಯನ್ನು ಕಂಡಿವೆ.
ದೇಶದಲ್ಲಿ ನಡೆದ ಹಲವು ಪ್ರಮುಖ ಕಾರ್ಯಕ್ರಮಗಳು , ಮುಖ್ಯವಾಗಿ ಜಿ-10 ಸಮ್ಮೇಳನ , ವಿಶ್ವ ಕಪ್ ಕ್ರಿಕೆಟ್ ಮುಂತಾದ ಹಲವು ಪ್ರಮುಖ ಘಟನಾವಳಿಗಳಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೂಸ್ಟ್ ಸಿಕ್ಕಂತಾಗಿದೆ. ಇದೀಗ ರಾಮ ಮಂದಿರ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕಾರಣಕ್ಕೆ ಭಾರತಕ್ಕೆ ಬರುವ ಪ್ರವಾಸಿಗರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.
ಇತ್ತೀಚಿಗೆ ಪ್ರಕಟವಾದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಕುರಿತ ಅಂಕಿ – ಅಂಶಗಳಲ್ಲೂ ಕೂಡಾ ಇದೇ ವ್ಯಕ್ತವಾಗಿದೆ. ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಭಾರತಕ್ಕೆ ಬಂದು ಹೋದ ಅಂತಾರಾಷ್ಟ್ರೀಯ ಪ್ರಮಾಣಿಕರ ಸಂಖ್ಯೆ ಶೇ.9ರಷ್ಟು ವೃದ್ದಿಸಿದೆ. ಇದು ಹೋಟೆಲ್ ಉದ್ಯಮಕ್ಕೆ ದೊಡ್ಡ ಕೊಡುಗೆ.
ಮುಂದಿನ ದಿನಗಳಲ್ಲಿ ಹೊಟೇಲ್ ಉದ್ಯಮ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದುವ ಸೂಚನೆಯನ್ನು ಇದು ನೀಡಿದೆ. ಅದಕ್ಕಾಗಿ ಹಲವು ಉದ್ಯಮಗಳು ಈಗಾಗಲೇ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಗಳನ್ನು ರೂಪಿಸಿಕೊಂಡಿವೆ.
ಹಾಗಾಗಿ ಹೊಟೇಲ್ ಉದ್ಯಮಗಳ ಷೇರುಗಳು ಬಗ್ಗೆ ಸ್ವಲ್ಪ ಗಮನ ಇಡಬಹುದಾಗಿದೆ.

× Subscribe us