7 rupees

News @ your fingertips

ಗುಡ್ ನ್ಯೂಸ್ !ಭಾರತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು

ಗುಡ್ ನ್ಯೂಸ್ ! ಭಾರತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು

ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸಿಗರ ನೆಚ್ಚಿನ ತಾಣವಾಗಿ ಪರಿಗಣಿತವಾಗುತ್ತಿದೆ. ಭಾರತಕ್ಕೆ ಬರುವ ಹಾಗೂ ಹೋಗುವ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ ಗಣನೀಯವಾಗಿ ವೃದ್ದಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕಳೆದ ತ್ರೈ ಮಾಸಿಕ ಅವಧಿಯಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಪ್ರಮಾಣಿಕರ ಸಂಖ್ಯೆ ಶೆ.9ರಷ್ಟು ಏರಿಕೆ ಕಂಡಿದೆ. 2023 ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳ ಅವಧಿಯಲ್ಲಿ ಪ್ರಯಾಣಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರು 1.77ಕೋಟಿ. ಹಿಂದಿನ ತ್ರೈ ಮಾಸಿಕಕ್ಕೆ ಹೋಲಿಸಿದರೆ ಶೇ.9ರಷ್ಟು ಹೆಚ್ಚಿನ ಪ್ರಯಾಣಿಕರು ಬಂದು ಹೋಗಿದ್ದಾರೆ. 2022ರ ಸಾಲಿನಲ್ಲಿ ಅದೇ ಅವಧಿಯ ಅಂಕಿ- ಅಂಶಗಳನ್ನು ಗಮನಿಸಿದರೆ ಶೇ.19ರಷ್ಟು ಬೆಳವಣಿಗೆಯನ್ನು ನಾವು ಕಾಣಲಾಗಿದೆ. ಆದರೆ ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆ ಮಾತ್ರ ಅಲ್ಪಪ್ರಮಾಣದಲ್ಲಿ ಕುಸಿದೆ. ಒಟ್ಟಾರೆಯಾಗಿ ಶೇ 50 ರಷ್ಟು ಏರ್ ಟ್ರಾಫಿಕ್‌ನ್ನು ವಿದೇಶಿ ವಿಮಾನ ಕಂಪೆನಿಗಳು ನಿರ್ವಹಿಸುತ್ತಿವೆ.
ಧೈಲ್ಯಾಂಡ್ ಹಾಗೂ ಮಲೇಷಿಯಾ ದೀಶಗಳು ಭಾರತೀಯರಿಗೆ ಉಚಿತ ವೀಸಾ ಸವಲತ್ತುಗಳನ್ನು ಪ್ರಕಟಿಸಿವೆ. ಅದರ ಸಂಪೂರ್ಣ ಲಾಭವನ್ನು ಪಡೆಯಲ್ಲಿ ಭಾರತೀಯ ವಿಮಾನ ಕಂಪೆನಿಗಳು ಮಾತ್ರ ಸಫಲವಾಗಿಲ್ಲ. ಮಲೇಷಿಯಾಕ್ಕೆ ಭಾತದ ಏಕೈಕ ವಿಮಾನ ಹಾರಾಟ ನಡೆಸಿದ್ದರೆ, ವಿದೇಶಿ ವಿಮಾನಗಳು ನಿರಂತರ ಸೇವೆಯನ್ನು ಒದಗಿಸುತ್ತಿವೆ.
ಇದೇ ಹೊತ್ತಿನಲ್ಲಿ ಟಾಟಾ ಸಮೂಹ ಸಂಸ್ಥೆಯ ವಿಸ್ತಾರ ವಿಮಾನವೂ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಮತ್ತಷ್ಟು ಚುರುಕು ಕಂಡಿದೆ. ಅಂತಾರಾಷ್ಟ್ರೀಯ ವಿಮಾನ ಯಾನದಲ್ಲಿ ಕಳೆದ ತ್ರೈ ಮಾಸಿಕದಲ್ಲಿ ಏಳನೇ ಸ್ಣಾನದಲ್ಲಿದ್ದ ವಿಸ್ತಾರ ಏರ್‌ಲೈನ್ಸ್ ಈಗ ಐದನೇ ಸ್ಥಾನಕ್ಕೆ ಏರಿದೆ. ಪ್ರಯಾಣಿಕರ ಪ್ರಮಾಣ ಗಮನಿಸಿದರೆ ಶೇ. 23ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

× Subscribe us