7 rupees

News @ your fingertips

ಗಲ್ಫ್ ರಾಷ್ಟ್ರಗಳಿಗೆ ವಿಮಾನ ಯಾನ ದುಬಾರಿ

ಗಲ್ಫ್ ರಾಷ್ಟ್ರಗಳಿಗೆ ವಿಮಾನ ಯಾನ ದುಬಾರಿ

ಬೇಸಿಗೆ ರಜೆ , ಹಬ್ಬದ ಪ್ರಯುಕ್ತ ಕೊಲ್ಲಿ ರಾಷ್ಟ್ರಗಳ ಪ್ರಯಾಣ ಏಕಾಏಕಿ ದುಬಾರಿಯಾಗಿದೆ.
ವರ್ಷದ ಇತರ ದಿನಗಳಿಗೆ ಹೋಲಿಸಿದರೆ ಕರ್ನಾಟಕ ಕರಾವಳಿ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಯಾನ ಟಿಕೆಟ್ ದರ ಬಹುತೇಕ ದುಪ್ಪಟಾಗಿದೆ.
ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ 20 -25 ಸಾವಿರ ರೂ.ಗಳಿಗೆ ಏಕಮುಖ ಪ್ರಯಾಣ ಸಾಧ್ಯವಾಗುತ್ತಿತ್ತು. ಅದರೆ ಅದು ಸದ್ಯ ವಿಪರೀತ ಏರಿಕೆ ಕಂಡಿದೆ. ಸದ್ಯದ ವಿಮಾನ ದರ ಪರಿಶೀಲಿಸಿದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ದಮಾಮ್‌ನಿಂದ (ಏಕಮುಖ ಸಂಚಾರ) 51 ಸಾವಿರ ರೂ, ದುಬೈಯಿಂದ 70 ಸಾವಿರ ರೂ, ಅಬುಧಾಬಿಯಿಂದ 45 ಸಾವಿರ ರೂ, ದೋಹಾದಿಂದ 53 ಸಾವಿರ ರೂ.ಅದೇ ರೀತಿಯಲ್ಲಿ ಕೊಲ್ಲಿ ರಾಷ್ಟ್ರಗಳಿಗೆ ಮರಳಿ ಹೋಗುವ ಟಿಕೆಟ್ ಕೂಡ ದುಬಾರಿಯಾಗಿದೆ. ಉದಾಹರಣೆಗೆ ಅಬುಧಾಬಿಗೆ 47 ಸಾವಿರ ರೂ, ದೋಹಾಕ್ಕೆ 36 ಸಾವಿರ ರೂ, ದಮಾಮ್‌ಗೆ 33 ಸಾವಿರ ರೂ, ಜೆಡ್ಡಾ 58 ಸಾವಿರ ರೂ ಇದೆ. ಗಲ್ಫ್ ರಾಷ್ಟ್ರಗಳಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಕುವೈತ್ ಹಾಗೂ ಮಂಗಳೂರು ನಡುವಿನ ಪ್ರಯಾಣ ದರ ಕಡಿಮೆ ಇದೆ.
ಪ್ರಸ್ತುತ ಕುವೈತ್ ಮತ್ತು ಮಂಗಳೂರು ನಡುವೆ ದ್ವಿಮುಖ ಪ್ರಯಾಣಕ್ಕೆ (ಆಗಮನ ಮತ್ತು ನಿರ್ಗಮನ ಎರಡು ಪ್ರಯಾಣ ಸೇರಿ) ಓರ್ವಗೆ ಸುಮಾರು 50 ಸಾವಿರ ರೂ.ಬೇಕಾಗುತ್ತದೆ.

ರಜೆ, ಹಬ್ಬ ಕಾರಣ
ಕೊಲ್ಲಿ ರಾಷ್ಟ್ರಗಳಲ್ಲಿ ವರ್ಷಾವಧಿ ಶೈಕ್ಷಣಿಕ ಬೇಸಿಗೆ ರಜೆ, ಈಸ್ಟರ್, ರಮಜಾನ್ ಹಬ್ಬಗಳು ಸಾಮಾನ್ಯವಾಗಿ ಒಟ್ಟಿಗೆ ಬರುತ್ತದೆ. ಹಾಗಾಗಿ ಅಲ್ಲಿ ನೆಲೆಸಿರುವ ಭಾರತೀಯರು ಸಹಜವಾಗಿ ತಾಯ್ನಡಿಗೆ ಮರಳ ಬಯಸುತ್ತಾರೆ.ಇದೇ ಅವಕಾಶ ಬಳಸಿಕೊಂಡು ವಿಮಾನ ಯಾನ ಸಂಸ್ಥೆಗಳು ಟಿಕೆಟ್ ದರ ಏರಿಕೆ ಮಾಡುತ್ತವೆ.
ಕರ್ನಾಟಕದ ಸುಮಾರು 1.50 ಲಕ್ಷ ಮಂದಿ ಉದ್ಯೋಗ ಸಲುವಾಗಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಬಹುತೇಕರು ಕರಾವಳಿಗರು.

× Subscribe us