7 rupees

News @ your fingertips

ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಇಳಿಸಿದ ಕಾರ್ಲೈಲ್ ಗ್ರೂಪ್

ಅಮೆರಿಕ ಮೂಲದ ಹೂಡಿಕೆ ಕಂಪೆನಿ ಕಾರ್ಲೈಲ್ ಗ್ರೂಪ್ ಯೆಸ್ ಬ್ಯಾಂಕಿನಲ್ಲಿನ ತನ್ನ ಶೇ.2ರಷ್ಟು ಷೇರುಗಳನ್ನು ಶುಕ್ರವಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.
ಕಾರ್ಲೈಲ್ ಗ್ರೂಪಿಗೆ ಒಳಪಟ್ಟ ಸಿಎ ಬಾಸಿಕ್ಯೂ ಇನ್‌ವೆಸ್ಟ್‌ಮೆಂಟ್ ಸಂಸ್ಥೆ ಶುಕ್ರವಾರ ಬ್ಲಾಕ್ ಡೀಲ್ ಮೂಲಕ ಷೇರುಗಳನ್ನು ಮಾರಾಟ ಮಾಡಿದೆ.
59.40 ಕೋಟಿ ಷೇರುಗಳನ್ನು ಸರಾಸರಿ 24.27 ರೂ.ಗಳಿಗೆ ಮಾರಾಟ ಮಾಡಿದ್ದು , ಒಟ್ಟು ಮೌಲ್ಯ 1441.64 ಕೋ. ರೂ.ಗಳು.
ಕಾರ್ಲೈಲ್ ಗ್ರೂಪ್ ಬ್ಯಾಂಕಿನಲ್ಲಿ ಶೇ. 9.11 ರಷ್ಟು ಪಾಲನ್ನು ಹೊಂದಿದ್ದು, ಇದೀಗ ಅದು ಶೇ.7.13ಕ್ಕೆ ಇಳಿದಿದೆ.
ಕಳೆದ ಫೆಬ್ರವರಿಯಲ್ಲಷ್ಟೇ ಕಾರ್ಲೈಲ್ ಗ್ರೂಪ್ ಬ್ಯಾಂಕಿನಲ್ಲಿ ಶೇ.1.3 ರಷ್ಟು ಪಾಲನ್ನು 1057 ಕೋ.ರೂ.ಗಳಿಗೆ ಖರೀದಿಸಿತ್ತು.
ಈ ನಡುವೆ ಗೋಲ್ಡ್‌ಮನ್ ಸ್ಯಾಚ್(ಸಿಂಗಾಪುರ) ಯೆಸ್ ಬ್ಯಾಂಕಿನಲ್ಲಿ ಶೇ.1.23 ಪಾಲಿನ 36.92 ಕೋ. ಷೇರುಗಳನ್ನು ಸರಾಸರಿ 24.26ರೂ.ಯಂತೆ ( ಒಟ್ಟು ಮೌಲ್ಯ 895.78 ಕೋ.ರೂ.) ಖರೀದಿಸಿದೆ.

× Subscribe us