7 rupees

News @ your fingertips

ಬ್ಯಾಂಕ್‌ಗಳ ಕೇಂದ್ರದ ಷೇರು ಕಡಿತ

ಬ್ಯಾಂಕ್‌ಗಳ ಕೇಂದ್ರದ ಷೇರು ಕಡಿತ

ಸಾರ್ವಜನಿಕ ವಲಯ ಐದು ಬ್ಯಾಂಕ್‌ಗಳು ತನ್ನಲ್ಲಿನ ಕೇಂದ್ರ ಸರಕಾರದ ಷೇರು ಪಾಲನ್ನು ಕಡಿತಗೊಳಿಸುವ ಚಿಂತನೆ ನಡೆಸಿವೆ. ಸೆಬಿಯ ಕನಿಷ್ಠ ಸಾರ್ವಜನಿಕ ಷೇರು ಹೂಡಿಕೆ ( ಎಂಪಿಎಸ್) ಷರತ್ತುಗಳ ಅನ್ವಯ ಈ ಬ್ಯಾಂಕ್‌ಗಳು ಸರಕಾರದ ಪಾಲನ್ನು ಶೇ 75ಕ್ಕಂತ ಕಡಿಮೆಗೊಳಿಸಲು ಸಿದ್ದತೆ ನಡೆಸಿವೆ.ಬ್ಯಾಂಕ್ ಆಫ್ ಮಹಾರಾಷ್ಟ್ರ ,ಐಒಬಿ , ಯಕೋ ಬ್ಯಾಂಕ್ ಸೇರಿದಂತೆ 5 ಬ್ಯಾಂಕ್‌ಗಳು ಈ ನಿರ್ಧಾರ ಮಾಡಿವೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ನಾಲ್ಕು ಈಗಾಗಲೇ ಸೆಬಿಯ ಈ ಷರತ್ತನ್ನು ಪಾಲಿಸಿವೆ. ಈ ಅರ್ಥಿಕ ವರ್ಷದ ಅಂತ್ಯದೊಳಗೆ ಮೂರು ಬ್ಯಾಂಕ್‌ಗಳು ತನ್ನ ಹೂಡಿಕೆಯನ್ನು ಇಳಿಕೆ ಮಾಡಲಿದ್ದು , ಮುಂದಿನ ದಿನಗಳಲ್ಲಿ ಮತ್ತೆ 5 ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಕೇಂದ್ರ ಅರ್ಥಿಕ ಸೇವೆ ಕಾರ್ಯದರ್ಶಿ ವಿವೇಕ್ ಜೋಶಿ ಹೇಳಿದ್ದಾರೆ.
ಸದ್ಯದ ಅಂಕಿ- ಅಂಶಗಳ ಪ್ರಕಾರ , ದೆಹಲಿಯ ಮೂಲದ ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್ ಶೇ.98.25 , ಚೆನ್ನೈಯ ಇಂಡಿಯನ್ ಓವಸೀಸ್ ಬ್ಯಾಂಕ್ ಶೇ.96.38 , ಯುಕೋ ಬ್ಯಾಂಕ್ ಶೇ. 95.39 , ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ ಶೇ. 93.08 , ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ.86.46ರಷ್ಟು ಪಾಲನ್ನು ಕೇಂದ್ರ ಸರಕಾರ ಹೊಂದಿದೆ.
ಸೆಬಿ ನಿಯಮದಂತೆ ಲಿಸ್ಟ್ ಆಗಿರುವ ಕಂಪೆನಿಯ ಕನಿಷ್ಠ ಶೇ.25 ಪಾಲನ್ನು ಸಾರ್ವಜನಿಕ ವಲಯಕ್ಕೆ ನೀಡುವುದು ಕಡ್ಡಾಯ. ಈ ನಿಯಮದನ್ವಯ ಪಾಲನ್ನು ಕಡಿತಗೊಳಿಸಲು 2024ರ ಆಗಸ್ಟ್‌ವರಗೆ ಕಾಲಾವಕಾಶ ನಿಗದಿಪಡಿಸಲಾಗಿದೆೆ.
ಸರಕಾರದ ಈ ಪಾಲನ್ನು ಫಾಲೋ ಅಪ್ ಐಸಿಒ ( ಮುಂದುವರಿದ 2ನೇ ಐಪಿಒ) ಅಥವಾ ಆರ್ಹ ಸಾಂಸ್ಥಿಕ ವಿತ್ತೀಯ ಸಂಸ್ಥೆಗಳಿಗೆ ನೀಡಲು ಅವಕಾಶ ಇದೆ. ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿ , ಸೂಕ್ತ ನಿರ್ಧಾರಗಳನ್ನು ಬ್ಯಾಂಕ್‌ಗಳು ಕೈಗೊಳ್ಳಲಿವೆ ಎಂದು ಅವರು ವಿವರಿಸಿದ್ದಾರೆ.