7 rupees

News @ your fingertips

ಕೋಟಕ್‌ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ

ಖಾಸಗಿ ರಂಗದ ಪ್ರಮುಖ ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ತಕ್ಷಣದಿಂದ ಅನ್‌ಲೈನ್ ಪೋರ್ಟಲ್ ಹಾಗೂ ಆ್ಯಪ್‌ನಿಂದ ಹೊಸ ಗ್ರಾಹಕರನ್ನು ನೊಂದಾಯಿಸುವುದು, ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಆರ್‌ಬಿಐ ಬುಧವಾರ ನಿರ್ದೇಶನ ನೀಡಿದೆ.
ಈಗ ಇರುವ ಎಲ್ಲ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಹಾಗೂ ಇನ್ನಿತರ ಸೇವೆಗಳನ್ನು ಮುಂದುವರಿಸಲು ಅನುವು ಮಾಡಿಕೊಡಲಾಗಿದೆ.
ಕೋಟಕ್ ಮಹೀಂದ್ರ ಬ್ಯಾಂಕ್‌ನ ಐಟಿ ವಿಭಾಗದಲ್ಲಿ ೨೦೨೨ ಹಾಗೂ ೨೦೨೩ರ ಸಾಲಿನಲ್ಲಿ ಕಂಡು ಬಂದಿರುವ ಕೆಲವೊಂದು ನ್ಯೂನತೆಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ಸಂಬಂಧ ಸಾಕಷ್ಟು ಸೂಚನೆಗಳನ್ನು ನೀಡಿದ್ದರೂ , ಸರಿಯಾದ ಪ್ರಕ್ರಿಯೆಗಳು ಜಾರಿಯಾಗಿಲ್ಲ ಎಂದು ಆರ್‌ಬಿಐ ವಿವರಿಸಿದೆ.
೨೦೧೮ ಹಾಗೂ ೨೦೧೯ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಇಂತಹದ್ದೇ ಲೋಪಗಳು ಕಂಡು ಬಂದಿದ್ದವು. ೨೦೨೦ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೂ ಆರ್‌ಬಿಐ ಈ ರೀತಿಯ ನಿರ್ಬಂಧ ಹೇರಿತ್ತು. ಬ್ಯಾಂಕ್ ತನ್ನ ಐಟಿ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡಬಳಿಕ ೨೦೨೨ರಲ್ಲಿ ನಿರ್ಬಂಧ ತೆರವುಗೊಂಡು, ಮತ್ತೆ ಹೊಸ ಗ್ರಾಹಕರ ನೊಂದಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.