7 rupees

News @ your fingertips

ಕುಸಿದ ಆರ್ಥಿಕ ಬೆಳವಣಿಗೆ , ನಿರೀಕ್ಷಿತ ಅಂದ ತಜ್ಞರು

ಭಾರತದ ಆರ್ಥಿಕ ಬೆಳವಣಿಗೆ ಎಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಶೇ.6.7ಕ್ಕೆ ಕುಸಿದಿದೆ. ಕಳೆದ ಐದು ತ್ರೈಮಾಸಿಕಗಳಿಗೆ ಹೋಲಿಸಿದರೆ ಇದು ಅಲ್ಪ ಮಟ್ಟಿನ ಇಳಿಕೆಯಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ.7.8ರಷ್ಟಿತ್ತು.
‘ಇದು ನಿರೀಕ್ಷಿತ ಬೆಳವಣಿಗೆಯಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳು ಇಳಿಮುಖವಾಗಿದ್ದ ಕಾರಣ , ಸಹಜವಾಗಿ ಬೆಳವಣಿಗೆ ಕುಂಠಿತವಾಗಿದೆ’ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಶೇ.8.2ರಷ್ಟಿತ್ತು. ಪ್ರಸಕ್ತ ಅವಧಿಯಲ್ಲಿ ಆರ್‌ಬಿಐ ಶೇ.7.2 ಬೆಳವಣಿಗೆಯನ್ನು ನಿರೀಕ್ಷೆ ಮಾಡಿತ್ತು. ಅದರೆ ಈ ಅಂದಾಜು ಹುಸಿಯಾಗಿದ್ದು, ಶುಕ್ರವಾರ ಪ್ರಕಟಗೊಂಡ ಅಂಕಿ-ಅಂಶಗಳ ಪ್ರಕಾರ ಬೆಳವಣಿಗೆ ಇಳಿಮುಖವಾಗಿದೆ.
ಕೃಷಿ ವಲಯದಲ್ಲೂ ಈ ಅವಧಿಯಲ್ಲಿ ಬೆಳವಣಿಗೆ ಕುಸಿದಿದೆ. ಹಿಂದಿನ ವರ್ಷ ಶೇ.3.2ರಷ್ಟಿದ್ದು , ಈಗ ಶೇ. 2ರಷ್ಟು ಪ್ರಗತಿ ಸಾಧ್ಯವಾಗಿದೆ. ಉತ್ಪಾದನಾ ವಲಯದಲ್ಲಿ ಸ್ವಲ್ಪ ಮಟ್ಟಿನ ಉತ್ತಮ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷ ಶೇ.5ರಷ್ಟಿದ್ದು , ಈ ಬಾರಿ ಶೇ.7ರಷ್ಟು ಅಭಿವೃದ್ಧಿ ಸಾಧ್ಯವಾಗಿದೆ.

× Subscribe us