7 rupees

News @ your fingertips

4 ಕಂಪೆನಿ ಸ್ಟಾಕ್‌ಗಳು ಹೈಜಂಪ್ ಹೊಡೆಯಲು ಕಾರಣ

ಅಪ್ಟಿಕಲ್ ಫೈಬರ್ ಸ್ಟಾಕ್‌ಗಳು ಬುಧವಾರ ಬಹು ಬೇಡಿಕೆಯ ಷೇರುಗಳಾಗಿದ್ದವು.
ಈ ವಲಯದ ಪ್ರಮುಖ ಕಂಪೆನಿಗಳಾದ ತೇಜಸ್ ನೆಟ್‌ವರ್ಕ್ ಶೇ.12.10 ಏರಿಕೆ ಕಂಡು 1290 ರೂ. ದಾಖಲಿಸಿತು. ಸ್ಟೆರ್‌ಲೈಟ್ ಟೆಕ್ನಾಲಜಿ ಶೇ. 9ರಷ್ಟು ಜಂಪ್ ಪಡೆದು 143.84 ರೂ.ಗಳಿಗೇರಿತು. ಎಚ್‌ಎಫ್‌ಸಿಎಲ್ ಶೇ.11.52 ಏರಿದ್ದು , 134 ರೂ.ಗಳಿಗೆ ತಲುಪಿತು. ಬಿರ್ಲಾ ಕೇಬಲ್ ಶೇ.6 ರಷ್ಟು ಜಗಿದು, 282.40 ರೂ.ಯಲ್ಲಿ ವಹಿವಾಟು ನಡೆಸಿತು.
ಈ ನಾಲ್ಕು ಕಂಪೆನಿಗಳು ಟೆಲಿಕಮ್ಯುನಿಕೇಷನ್ ಮತ್ತು ಡಾಟಾ ಸೇವೆಯ ಅತ್ಯಂತ ಕ್ಲಿಷ್ಟಕರ ಪರಿಕರಗಳನ್ನು ಉತ್ಪಾದಿಸುತ್ತಿವೆ. ಹೈಸ್ಪೀಡ್ ಡಾಟಾ ಸೇವೆಯ ಅತ್ಯಂತ ಮಹತ್ವದ ಪಾತ್ರ ವಹಿಸುವ ಫೈಬರ್‌ಕೇಬಲ್‌ಗಳನ್ನು ಈ ಕಂಪೆನಿಗಳು ತಯಾರು ಮಾಡುತ್ತವೆ.
ಭಾರತ್ ನೆಟ್ ಯೋಜನೆಯ ಮೆಗಾ ಟೆಂಡರ್ ಆಗಸ್ಟ್ 8ರಂದು ತೆರೆದುಕೊಳ್ಳಲಿದೆ ಎನ್ನುವ ಸುದ್ದಿ ಇದೆ. ಈ ಹಿನ್ನಲೆಯಲ್ಲಿ ಈ ನಾಲ್ಕು ಕಂಪೆನಿಗಳ ಷೇರುಗಳು ಬುಧವಾರ ಜೋರ್‌ದಾರ್ ವಹಿವಾಟು ನಡೆಸಿವೆ..

× Subscribe us