7 rupees

News @ your fingertips

ಸ್ಯಾನ್‌ಸ್ಟಾರ್ ಶೇ.14 ಪ್ರೀಮಿಯಂನಲ್ಲಿ ಲಿಸ್ಟ್

ಸಸ್ಯ ಆಧರಿತ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಗುಜರಾತ್ ಮೂಲದ ಸ್ಯಾನ್‌ಸ್ಟಾರ್ ಲಿಮಿಟೆಡ್ ಕಂಪೆನಿಯ ಷೇರು ಶುಕ್ರವಾರ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಆರಂಭ ದಿನವೇ ಶೇ14ರಷ್ಟು ಉತ್ತಮ ಗಳಿಕೆ ಪಡೆದಿವೆ.
ಜುಲೈ 19ರಂದು ಆರಂಭಗೊಂಡಿದ್ದ ಐಪಿಒ ಜು.23ರಂದು ಕೊನೆಗೊಂಡಿತ್ತು. 95 ರೂ. ಇಶ್ಯೂ ದರ ಹೊಂದಿದ್ದ ಐಪಿಒಗೆ ವಿತ್ತೀಯ ಸಂಸ್ಥೆಗಳು , ಎಫ್‌ಐಐ ಹಾಗೂ ರಿಟೇಲ್ ಹೂಡಿಕೆದಾರರು ಕೂಡಾ ಅತ್ಯುತ್ತಮವಾಗಿ ಸ್ಪಂದಿಸಿದ್ದರು. ಬಿಎಸ್‌ಸಿ ಅಂಕಿ- ಅಂಶಗಳ ಪ್ರಕಾರ ಇಶ್ಯೂಗೆ 82.99 ಪಟ್ಟು ಹೆಚ್ಚುವರಿ ಬೇಡಿಕೆ ಸಲ್ಲಿಕೆಯಾಗಿತ್ತು.
ಸಂಸ್ಥೆಯ ಷೇರುಗಳು ಶುಕ್ರವಾರ ಲಿಸ್ಟ್‌ಗೊಂಡಿದೆ. ಎನ್‌ಎಸ್‌ಸಿಯಲ್ಲಿ 109 ರೂ.ಗಳಿಗೆ (ಶೇ. 14.73) ೆ ಹಾಗೂ ಬಿಎಸ್‌ಸಿಯಲ್ಲಿ 106.40ರೂ (ಶೇ.12) ಲಿಸ್ಟ್ ಆಗಿದೆ.
ಮಾರುಕಟ್ಟೆ ಈ ಷೇರುಗಳು 125ರಿಂದ 130 ರೂ.ಗಳಿಗೆ ಲಿಸ್ಟ್ ಆಗುವ ನಿರೀಕ್ಷೆಯನ್ನು ಹೊಂದಿದ್ದರೂ , ಹೂಡಿಕೆದಾರರಿಗೆ ಮೊದಲ ದಿನವೇ ಶೇ.14ರಷ್ಟು ಗಳಿಕೆಯನ್ನು ತಂದು ಕೊಟ್ಟಿವೆ.

 

× Subscribe us