7 rupees

News @ your fingertips

ವಾಟ್ಸಾಪ್‌ ಸೇವೆ ಸ್ಥಗಿತ ಕೇಂದ್ರಕ್ಕೆ ಮಾಹಿತಿಯಿಲ್ಲ


ವಾಟ್ಸಾಪ್ ಅಥವಾ ಅದರ ಮಾತೃ ಸಂಸ್ಥೆ ಮೆಟಾ ಭಾರತದಲ್ಲಿ ತನ್ನ ಸೇವೆಯನ್ನು ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಸರಕಾರಕ್ಕೆ ನೀಡಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಸೇವೆ ಸ್ಥಗಿತಗೊಳಿಸುವ ಕುರಿತ ಪ್ರಸ್ತಾವ ಬಗ್ಗೆ ವಾಟ್ಸಾಪ್ ಅಥವಾ ಮೆಟಾ ಇದುವರೆಗೆ ಯಾವುದೇ ವಿಚಾರವನ್ನು ತಿಳಿಸಿಲ್ಲ ಎಂದು ಸಚಿವರು ಕಾಂಗ್ರೆಸ್ ಸದಸ್ಯ ವಿವೇಕ್ ತಂಕಾ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.
.

× Subscribe us