7 rupees

News @ your fingertips

ಯುಎಸ್ ಮಾರುಕಟ್ಟೆ ಕುಸಿತ

ದುರ್ಬಲ ಉದ್ಯೋಗ ಡಾಟಾಗಳ ಪರಿಣಾಮ ಶುಕ್ರವಾರ ಯುಎಸ್ ಮಾರುಕಟ್ಟೆ ಕುಸಿತ ಕಂಡಿದೆ.ದುರ್ಬಲ ಉದ್ಯೋಗ ಡಾಟಾಗಳು ದೇಶ ಅರ್ಥಿಕ ಹಿಂಜರಿಕೆಯತ್ತ ಸಾಗುವ ಭೀತಿಯನ್ನು ಮೂಡಿಸಿದ ಪರಿಣಾಮ ಮಾರುಕಟ್ಟೆ ನೆಗೆಟಿವ್ ರೂಪದಲ್ಲಿ ಪ್ರತಿಕ್ರಿಯಿಸಿದೆ. ಡೋಜೋನ್ಸ್ 600 ಅಂಕಗಳನ್ನು ಕಳೆದುಕೊಂಡರೆ , ನಾಸ್ಡಾಕ್ 582 ಅಂಕಗಳ ಕುಸಿತ ಕಂಡಿತು.ಜೂನ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.4.1ರಿಂದ ಶೇ.4.3ಕ್ಕೆ ಏರಿದೆ. ಪೇ ರೋಲ್ಸ್‌ನಲ್ಲಿ ಕಡಿತವಾಗಿರುವುದು ಹಾಗೂ ನಿರುದ್ಯೋಗ ಪ್ರಮಾಣ ಏರಿಕೆಯಾಗಿರುವುದು ಅರ್ಥಿಕ ಹಿಂಜರಿಕೆಯ ಭೀತಿಯನ್ನು ಮೂಡಿಸುತ್ತಿದೆ. ಇದರಿಂದ ಸೆಪ್ಟೆಂಬರ್‌ನಲ್ಲಿ ಬಡ್ಡಿದರ ಇಳಿಕೆ ಮಾಡುವುದು ಅನಿವಾರ್ಯವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.