7 rupees

News @ your fingertips

ಮಾರುಕಟ್ಟೆ ಕುಸಿತ 4 ದಿನಗಳಲ್ಲಿ 9 ಲಕ್ಷ ಕೋ.ನಷ್ಟ

ಕಳೆದ ಕೆಲವು ದಿನಗಳಿಂದ ಇಳಿಮುಖದಲ್ಲಿರುವ ಷೇರು ಮಾರುಕಟ್ಟೆ ಗುರುವಾರ ಕೂಡಾ ಕುಸಿತ ಕಂಡಿದೆ.

ಎಪ್ರಿಲ್ ೧೮ ಗುರುವಾರ ಇಂದು ಕೂಡಾ ಷೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಕಂಡು ಬಂದಿದ್ದು, ಇಡಿ ದಿನದ ವಹಿವಾಟು ಅತ್ಯಂತ ಏರುಪೇರಿನಿಂದ ಕೂಡಿತ್ತು. ಬೆಳಗ್ಗೆ ಪಾಸಿಟಿವ್ ಆರಂಭಗೊಂಡು,ನಂತರದ ಅವಧಿಯಲ್ಲಿ ಕುಸಿತ ಕಂಡಿದೆ.ಕಳೆದ ನಾಲ್ಕು ದಿನಗಳಲ್ಲಿನ ನಿರಂತರ ಕುಸಿತದಿಂದಾಗಿ ಮಾರುಕಟ್ಟೆ ಒಟ್ಟು ಸುಮಾರು ೯ ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ.
ಬ್ಯಾಂಕಿಂಗ್ ಕ್ಷೀತ್ರದ ಹೆವಿವೇಟ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್,ಅಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಕಂಡು ಬಂದ ಮಾರಾಟ ಸೂಚ್ಯಂಕ ಮುಗ್ಗರಿಸುವಂತೆ ಮಾಡಿದೆ.
ಜಾಗತಿಕ ಮಾರುಕಟ್ಟೆ ಹೆಚ್ಚೇನು ಏರಿಳಿತ ಕಾಣದೆ ಸಮಿಶ್ರವಾಗಿದ್ದರೆ, ಯುರೋಪಿಯನ್ ಹಾಗೂ ಏಷ್ಯನ್ ಮಾರುಕಟ್ಟೆ ಗಳು ಇಂದು ಪಾಸಿಟಿವ್ ವಹಿವಾಟು ನಡೆಸಿವೆ. ಡಾಲರ್ ಹಾಗೂ ಕಚ್ಚಾ ತೈಲ ಬೆಲೆ ಅಲ್ಪ ಕುಸಿತ ಕಂಡಿದೆ. ಚಿನ್ನ ಬುಧವಾರ ೭೩ ಸಾವಿರ ಗಟಿ ದಾಟಿದ್ದು , ಇಂದು ಕೂಡಾ ಅದೇ ಬೆಲೆ ಅಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ಜಾಗತಿಕ ಮಟ್ಟದಲ್ಲಿ ಇಸ್ಸೇಲ್ -ಇರಾನ್ ನಡುವಿನ ಸಂಘರ್ಷ ಸಾಕಷ್ಟು ಗೊಂದಲ ನಿರ್ಮಿಸುತ್ತಿದೆ. ಇರಾನ್ ವಿರುದ್ಧ ದಾಳಿ ಕುರಿತ ಇಸ್ರೇಲ್ ಪ್ರಧಾನಿ ಹೇಳಿಕೆ ಮಾರುಕಟ್ಟೆಗೆ ದೃಷ್ಟಿಯಿಂದ ಪಾಸಿಟಿವ್ ಅನಿಸಿದೆ. ಅದರೆ ಮಾರಿಷಸ್ ತೆರಿಗೆ ವಿಚಾರ ಕುರಿತು ತೇಲಿ ಬಂದ ಸುದ್ದಿ , ವಿದೇಶಿ ವಿತ್ತ ಸಂಸ್ಥೆಗಳು( ಎಫ್‌ಐಐ) ಭಾರೀ ಪ್ರಮಾಣದಲ್ಲಿ ಮಾರಾಟಕ್ಕೆ ಇಳಿದದ್ದು , ಮಾರುಕಟ್ಟೆಯನ್ನು ಕೆಳಗಿಯುವಂತೆ ಮಾಡಿತು.
ಸೆನ್ಸೆಕ್ಸ್ ೪೪೫ಅಂಕ ಕುಸಿದರೆ, ನಿಫ್ಟಿ ೧೫೨ಅಂಕ ಇಳಿದಿದೆ. ಭರ್ತಿ ಏರ್‌ಟೇಲ್,ಇನ್ಫೋಸಿಸ್,ಪವರ್ ಗ್ರಿಡ್,ಎಲ್‌ಆ್ಯಂಡ್ ಟಿ ಷೇರುಗಳು ಮಾತ್ರ ಏರುಮುಖವಾಗಿದ್ದವು.
ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಕೂಡಾ ಕುಸಿತಕಂಡಿದೆ.
ನಾಳೆ ಶುಕ್ರವಾರ ವಾರಾಂತ್ಯ. ಸೆನ್ಸೆಕ್ಸ್ ಇಂಡೆಕ್ಸ್ ವಾರದ ಎಕ್ಸ್‌ಪಯರಿ ಕೂಡಾ.

× Subscribe us