7 rupees

News @ your fingertips

ಮಾಘಿ ಪೂರ್ಣಿಮೆಗೆ ಜನಸಾಗರ

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಮಾಘಿ ಪೂರ್ಣಿಮೆಯ ಪ್ರಯುಕ್ತ ಪವಿತ್ರ ಸ್ನಾನದಲ್ಲಿ ಸುಮಾರು 2ಕೋಟಿಗೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದರು.
ಯಾವುದೇ ಗೊಂದಲಗಳಿಲ್ಲದೆ ಎಲ್ಲರೂ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಸಂಜೆ 6 ಗಂಟೆ ಹೊತ್ತಿಗೆ 2 ಕೋಟಿಗೂ ಹೆಚ್ಚು ಭಕ್ತರು ಭಾಗಿಯಾಗಿರುವ ಮಾಹಿತಿಗಳು ಲಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂಭಮೀಳದ ಅವಧಿಯಲ್ಲಿ ನಡೆಯುವ 6 ಪುಣ್ಯಸ್ನಾನಗಳಲ್ಲಿ ಬುಧವಾರ ನಡೆದ ಮಾಘಿ ಪೂರ್ಣಿಮೆ ಸ್ನಾನ 5ನೇಯದು. ಅಂತಿಮ ಹಾಗೂ ಆರನೇ ಪುಣ್ಯ ಸ್ನಾನ ಮಹಾಶಿವರಾತ್ರಿಯಂದು ನಡೆಯಲಿದೆ.
ಹೆಚ್ಚಿನ ಭಕ್ತರ ಆಗಮನದ ಹಿನ್ನಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗನ್ನು ಹಾಗೂ ಎಚ್ಚರಿಕೆಯನ್ನು ವಹಿಸಲಾಗಿತ್ತು. ಕುಂಭ ಸ್ಥಳಗಳನ್ನು ‘ವಾಹನರಹಿತ ವಲಯ’ಗಳೆಂದು ಘೋಷಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಧಿಕ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ ಎಲ್ಲೆಡೆ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದ್ದು ,ಅದನ್ನು ಸಕಾಲದಲ್ಲಿ ನಿವಾರಿಸಲು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

.

× Subscribe us