7 rupees

News @ your fingertips

ಮಧ್ಯಪ್ರದೇಶದಲ್ಲಿ ಅದಾನಿ 3500 ಕೋ.ರೂ. ಹೂಡಿಕೆ

ಅದಾನಿ ಸಮೂಹ ಸಂಸ್ಥೆ ಮಧ್ಯ ಪ್ರದೇಶದ ಶಿವಪುರಿಯಲ್ಲಿ 2ಮಿಲಿಯನ್‌ಟನ್ ಸಾಮಾರ್ಥ್ಯದ ಸಿಮೆಂಟ್ ಘಟಕ ಸ್ಥಾಪಿಸಲು ಮುಂದಾಗಿದೆ.
3500 ಕೋ. ರೂ. ವೆಚ್ಚದ ಈ ಘಟಕ ಭಾರತ ಆತ್ಮನಿರ್ಭರ ಮಿಷನ್‌ನಡಿಯಲ್ಲಿ ರೂಪಿಸಲಾಗುತ್ತಿದೆ. ಘಟಕ ಸುಮಾರು 3500ರಷ್ಟು ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಅದಾನಿ ಪೋರ್ಟ್ಸ್ ಎಂಡಿ ಕರಣ್ ಅದಾನಿ ತಿಳಿಸಿದ್ದಾರೆ.
ಅದಾನಿ ಸಮೂಹ ಸಂಸ್ಥೆ ಈಗಾಗಲೇ ಮಧ್ಯಪ್ರದೇಶದಲ್ಲಿ ಸುಮಾರು 18 ಸಾವಿರ ಕೋ. ರೂ.ಗಳ ಬಂಡವಾಳ ಹೂಡಿದೆ. ಮುಖ್ಯವಾಗಿ ಗ್ವಾಲಿಯರ್ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ವಾಲಿಯರ್ ದೇಶ ಪ್ರಮುಖ ಅರ್ಥಿಕ ಹಬ್ ಆಗಿ ಬೆಳೆಯಲಿದೆ ಎಂದು ಅವರು ಹೇಳಿದರು.

 

× Subscribe us