7 rupees

News @ your fingertips

ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್


ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಬುಧವಾರ ಭಾರತ ಇಂಗ್ಲೆಂಡ್ ತಂಡವನ್ನು 142 ರನ್‌ಗಳ ಮೂಲಕ ಭರ್ಜರಿಯಾಗಿ ಸೋಲಿಸಿ, ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಂಡಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಪ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ಭಾರತದ ತಂಡ ಶುಭಮನ್‌ಗಿಲ್ ಅವರ ಭರ್ಜರಿ 112 ರನ್‌ಗಳ ಸಹಾಯದಿಂದ 50 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದು ಕೊಂಡು 356 ರನ್‌ಗಳ ದೊಡ್ಡ ಮೊತ್ತವನ್ನು ಕೂಡಿಹಾಕಿತು. ಭಾರತದ ಪರ ವಿರಾಟ್ ಕೊಹ್ಲಿ 52, ಶ್ರೇಯಸ್ ಐಯ್ಯರ್ 78 , ಕೆಎಲ್ ರಾಹುಲ್ 40 ರನ್‌ಗಳ ಕೊಡುಗೆ ನೀಡಿದರು.
ಬಳಿಕ ಆಟವಾಡಿದ ಇಂಗ್ಲೆಂಡ್ ತಂಡ ಯಾವುದೇ ಪ್ರತಿರೋಧ ತೋರದೆ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡು , 34.2 ಓವರ್‌ಗಳಲ್ಲಿ 214 ರನ್ ಕಲೆ ಹಾಕಲು ಶಕ್ತವಾಯಿತು.
ಮುಂದಿನ ವಾರದಿಂದ ಚಾಂಪಿಯನ್ಸ್ ಟ್ರೋಫಿ ಏಕದಿನದ ಪಂದ್ಯಗಳು ಆರಂಭವಾಗಲಿದೆ. ಅದಕ್ಕೂ ಮುನ್ನ ಭಾರತಕ್ಕೆ ಇದು ಕೊನೆಯ ಏಕದಿನ ಪಂದ್ಯವಾಗಿತ್ತು. ಈ ಸರಣಿ ಭಾರತಕ್ಕೆ ಅಭ್ಯಾಸ ಪಂದ್ಯಗಳಾಗಿ ನೆರವಾಯಿತು.

× Subscribe us