News @ your fingertips
News @ your fingertips
ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಅನುಮತಿಯನ್ನು ಉತ್ತರಖಂಡ ಲೈಸನ್ಸ್ ಪ್ರಾಧಿಕಾರ ರದ್ದುಗೊಳಿಸಿದೆ.
ಯೋಗ ಗುರು ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿಯ ದಿವ್ಯ ಫಾರ್ಮಸಿ ತಯಾರಿಸುವ 14 ಉತ್ಪನ್ನಗಳ ಬಗ್ಗೆ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ ಕಾರಣಕ್ಕೆ ಅನುಮತಿಯನ್ನು ರದ್ದುಪಡಿಸಲಾಗಿದೆ. ಜೊತೆಯಲ್ಲಿ ರಾಮದೇವ್‌ಬಾಬಾ , ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಸಂಸ್ಥೆ ವಿರುದ್ದ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಜನರನ್ನು ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪತಂಜಲಿ ನೀಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗಷ್ಟೆ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿ , ಕ್ಷಮೆ ಕೋರುವಂತೆ ನಿರ್ದೇಶನ ನೀಡಿತ್ತು.
ಇದಾದ ಬಳಿಕ ಈಗ ಉತ್ತರ ಖಂಡ ಪ್ರಾಧಿಕಾರ ಉತ್ಪನ್ನಗಳ ಅನುಮತಿಯನ್ನೇ ರದ್ದು ಪಡಿಸಿದೆ.
More Stories
ವಿಮಾನ ನಿಲ್ದಾಣ ಲೋಪಗಳ ಮೇಲೆ ಕಣ್ಗಾವಲು
ಬಿರ್ಲಾ ಫ್ಯಾಷನ್ನಿಂದ ಫ್ಲಿಫ್ ಕಾರ್ಟ್ ಹೊರಗೆ
ಪಾಕ್ನಲ್ಲಿ ಭೂಕಂಪ ಕೈದಿಗಳ ಪರಾರಿ