ಡಿಸೆಂಬರ್ ತಿಂಗಳಲ್ಲಿ ಸಾಲು ಸಾಲು ಐಪಿಒಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆ.
ಡಿ.11ರಂದು ಫಿನ್‌ಟೆಕ್ ಕ್ಷೇತ್ರದ ಒನ್ ಮೊಬಿಕ್ವಿಕ್ ಸಿಸ್ಟಮ್ಸ್ ಲಿಮಿಟೆಡ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು , ಉತ್ತಮ ಪ್ರತಿಕ್ರಿಯೆ ಪಡೆದಿದೆ.
572 ಕೋ.ರೂ. ಗಳನ್ನು ಷೇರು ಮಾರುಕಟ್ಟೆಯಿಂದ ಸಂಗ್ರಹಿಸುವ ಗುರಿ ಹೊಂದಿರುವ ಸಂಸ್ಥೆಯ ಐಪಿಒಗೆ ಮೊದಲ ದಿನವೇ ನಿರೀಕ್ಷೆ ಮೀರಿ ಸ್ಪಂದನೆ ಲಭಿಸಿದ್ದು , ಶೇ.7.32 ರಷ್ಟು ಹೆಚ್ಚುವರಿ ಬೇಡಿಕೆ ವ್ಯಕ್ತವಾಗಿದೆ.
ಐಪಿಒಗೆ 265ರೂ.ರಿಂದ 279 ರೂ. ದರ ಬ್ಯಾಂಡ್ ನಿಗದಿಪಡಿಸಲಾಗಿದೆ.
ಈಗಾಗಲೇ ಗ್ರೇ ಮಾರುಕಟ್ಟೆಯಲ್ಲೂ ಕಂಪೆನಿಯ ಷೇರುಗಳಿಗೆ ಉತ್ತಮ ಬೇಡಿಕೆ ಕಂಡು ಬಂದಿದೆ. ಮಾರುಕಟ್ಟೆಯ ವಿಶ್ಲೇಷಕರು ಈ ಸಂಸ್ಥೆಯ ಷೇರುಗಳು 400 ರೂ.ಗಳ ಮೇಲೆ ಲಿಸ್ಟ್ ಆಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
53 ಷೇರುಗಳ ಲಾಟ್‌ನಲ್ಲಿ ಷೇರುಗಳು ಲಭ್ಯವಾಗಿದ್ದು , ಡಿ.13ರಂದು ಇಶ್ಯೂ ಕೊನೆಗೊಳ್ಳಲಿದೆ.
News @ your fingertips
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ