News @ your fingertips
News @ your fingertips
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಭಾರತ ಹಾಗೂ ಪೂರ್ವ ರಾಜ್ಯಗಳಲ್ಲಿ ದೊಡ್ಡ ಸಾಧನೆ ಮಾಡುವ ನಿರೀಕ್ಷೆ ಇದೆ ಎಂದು ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಿಸಿದ್ದಾರೆ.
ಉತ್ತರ ಭಾರತದಲ್ಲಿ ಬಿಜೆಪಿ ಸಾಧನೆ ಗರಿಷ್ಠ ಮಟ್ಟದಲ್ಲಿ ಉಳಿದುಕೊಳ್ಳಲಿದೆ. ಜೊತೆಯಲ್ಲಿ ಈ ಬಾರಿ ದಕ್ಷಿಣಭಾರತ ಹಾಗೂ ಪೂರ್ವ ರಾಜ್ಯಗಳಲ್ಲೂ ಉತ್ತಮ ಸಾಧನೆ ತೋರುವ ಸಾಧ್ಯತೆಗಳಿವೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ಸಂಪ್ರಾದಾಯಿಕವಾಗಿ ದಕ್ಷಿಣ ಹಾಗೂ ಪೂರ್ವ ರಾಜ್ಯಗಳು ಬಿಜೆಪಿ ಪಾಲಿಗೆ ಅಷ್ಟೊಂದು ಪೂರಕವಾಗಿಲ್ಲ ಎನ್ನುವ ಭಾವನೆ ಇದೆ. ಅದರೆ ಈ ಬಾರಿ ತೆಲಂಗಾಣ, ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿರೀಕ್ಷೆಗಿಂತಲೂ ಉತ್ತಮ ಸಾಧನೆ ತೋರುವ ಸಾಧ್ಯತೆಗಳಿವೆ.
ತೆಲಂಗಾಣದಲ್ಲಿ ಒಂದನೇ ಅಥವಾ ಎರಡನೇ ಸ್ಥಾನಕ್ಕೆ ಬಿಜೆಪಿ ಬರಬಹುದಾದರೆ, ಒರಿಸ್ಸಾದಲ್ಲಿ ನಂಬರ್ ಒನ್ ಸ್ಥಾನ ಪಡೆಯುವುದು ಖಂಡಿತ. ಅಶ್ಚರ್ಯವೆಂದರೆ ಪಶ್ಚಿಮ ಬಂಗಾಳದಲ್ಲೂ ನಂಬರ್ ಒನ್‌ಯೆನಿಸಿಕೊಳ್ಳಬಹುದು.ರಾಜ್ಯದ ಒಟ್ಟಾರೆ ಮತಗಳಿಕೆಯಲ್ಲಿ ಎರಡಂಕಿ ದಾಟುವುದರಲ್ಲಿ ಸಂಶಯ ಇಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ಮುಖ್ಯವಾಗಿ ಅಂಧ್ರಪ್ರದೇಶ , ತಮಿಳುನಾಡು , ಕೇರಳದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳಲು ಹಲವು ವರ್ಷಗಳಿಂದ ಕಷ್ಟಪಡುತ್ತಿದೆ. ಅದರೆ ಈ ಬಾರಿಯ ಚುನಾವಣೆಯಲ್ಲಿ ಗಣನೀಯ ಸಾಧನೆಯನ್ನು ತೋರಲಿದೆ ಎಂದು ಅವರು ವಿವರಿಸಿದ್ದಾರೆ.
ಲೋಕಸಭೆಯಲ್ಲಿ ೩೭೦ ಸ್ಥಾನಗಳನ್ನು ಪಡೆಯುವ ಬಿಜೆಪಿಯ ಗುರಿ ಬಹುತೇಕ ಸಾಕಾರಗೊಳ್ಳುವ ಸಾಧ್ಯತೆಗಳಿವೆ. ಬಿಜೆಪಿ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ ೧೦೦ ಸ್ಥಾನಗಳನ್ನು ಪಡೆಯುವ ಪ್ರಯತ್ನ ಮಾಡದಿದ್ದರೆ , ಬಿಜೆಪಿಯ ಓಟಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೇಳಿದ್ದಾರೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ