7 rupees

News @ your fingertips

ಟಾಟಾ ಎಲೆಕ್ಟ್ರಾನಿಕ್ಸ್‌ನಿಂದ 27 ಸಾವಿರ ಕೋ. ಹೂಡಿಕೆ


ಟಾಟಾ ಎಲೆಕ್ಟ್ರಾನಿಕ್ಸ್ ಕಂಪೆನಿಯು 27 ಸಾವಿರ ಕೋ.ರೂ. ವೆಚ್ಚದಲ್ಲಿ ಅಸ್ಸಾಂನಲ್ಲಿ ಸ್ಥಾಪಿಸಲಿರುವ ಚಿಪ್ ಅಸೆಂಬ್ಲಿ ಘಟಕ 2025ರಲ್ಲಿ ಕಾರ್ಯಾರಂಭ ಮಾಡಲಿದೆ.
ಈ ಘಟಕ 27 ಸಾವಿರ ಮಂದಿಗೆ ಉದ್ಯೋಗವನ್ನು ನೀಡಲಿದೆ ಎಂದು ಟಾಟಾ ಸನ್ಸ್ ನ ಚೇರ್‌ಮೆನ್ ಎನ್. ಚಂದ್ರಶೇಖರ್ ತಿಳಿಸಿದ್ದಾರೆ.
ಚಿಪ್ ಘಟಕದ ಶಂಕುಸ್ಥಾಪನೆ ಸಂದರ್ಭದಲ್ಲಿ ಮಾತನಾಡಿದ ಅವರು ಘಟಕಕ್ಕಾಗಿ ಆಸ್ಸಾಂ ನಿಂದ ಈಗಾಗಲೇ 1000 ಮಂದಿಯನ್ನು ನೇಮಕ ಮಾಡಲಾಗಿದೆ. ಈ ಘಟಕ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದಾಗ 15 ಸಾವಿರ ನೇರ ಹಾಗೂ 12 ಸಾವಿರ ಪರೋಕ್ಷಉದ್ಯೋಗ ಸೃಷ್ಟಿಯಾಗಲಿದೆ . ಅತಿ ವೇಗದಲ್ಲಿ ಘಟಕದ ನಿರ್ಮಾಣ ಕಾರ್ಯ ನಡೆಯಲಿದ್ದು , 2025ರಲ್ಲಿ ಅದು ಕೆಲಸ ಆರಂಭಿಸಲಿದೆ ಎಂದು ಅವರು ಹೇಳಿದರು.
ಟಾಟಾ ಸೆಮಿಕಂಡೆಕ್ಟರ್ ಜೋಡಣಾ ಹಾಗೂ ಪರೀಕ್ಷಾ ಕೇಂದ್ರ ದೇಶದ ಮೊದಲ ಸ್ವತಂತ್ರ ಸ್ವದೇಶಿ ಸೆಮಿಕಂಡಕ್ಟರ್ ಜೋಡಣಾ ಹಾಗೂ ಪರೀಕ್ಷಾ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

× Subscribe us