News @ your fingertips
News @ your fingertips
ಆಹಾರ ಸರಬರಾಜು ಮಾಡುವ ಜೋಮಟೋ ಕಂಪೆನಿ ಈ ಅರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಂಸ್ಥೆ ೨೫೩ ಕೋ.ರೂ.ಗಳ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ ಕೇವಲ ೨ ಕೋ.ರೂ. ಲಾಭ ಪಡೆದಿತ್ತು. ಕಳೆದ ಅವಧಿಗೆ ಹೋಲಿಸಿದರೆ ಲಾಭ ಪ್ರಮಾಣ ಶೇ.೧೨೬.೫ ಪಟ್ಟು ಜಾಸ್ತಿಯಾಗಿದೆ. ಒಟ್ಟು ಅದಾಯ ಶೇ.೭೪ ರಷ್ಟು ಹೆಚ್ಚಾಗಿದ್ದು , ೪೨೦೬ ಕೋ.ರೂ. ಗಳಿಗೇರಿದೆ. ಕಳೆದ ಸಾಲಿನಲ್ಲಿ ಅದು೨೪೧೬ ಕೋ.ರೂ.ಗಳಾಗಿತ್ತು. ಈ ಅವಧಿಯಲ್ಲಿ ಗ್ರಾಹಕರ ಪ್ರಮಾಣವೂ ಏರಿಕೆಯಾಗಿದ್ದು , ಕಂಪೆನಿಯ ಸಹ ಸಂಸ್ಥೆ ಬ್ಲಿಂಕ್ಇಟ್ನ ನಿರ್ವಹಣಾ ಅದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.
ಕಂಪೆನಿಯ ಬರುತ್ತಿರುವ ಪುಡ್ಆರ್ಡರ್ನಲ್ಲೂ ಶೇ.೧೩೦ ರಷ್ಟು ಏರಿಕೆಯಾಗಿದೆ. ಕಳೆದ ಕೆಲ ಸಮಯದ ಹಿಂದೆ ೮೧ ರೂ.ಗಳಿಗೆ ಇಳಿದಿದ್ದ ,ಕಂಪೆನಿಯ ಷೇರುಗಳು ಬುಧವಾರ ಗರಿಷ್ಟ ಮಟ್ಟ ೨೩೮ರೂ.ಗಳಿಗೆ ತಲುಪಿದವು.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ