7 rupees

News @ your fingertips

ಚಿನ್ನ ಬೆಳ್ಳಿ ದರ ಶೆ.65ರಷ್ಟು ಏರಿಕೆ

ಚಿನ್ನ ಮತ್ತು ಬೆಳ್ಳಿ ದರ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಏರಿಕೆಯನ್ನು ಕಂಡಿದೆ. ಭಾರತದ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿದರೆ, 2025ರ ಆರಂಭದಿಂದ ಚಿನ್ನದ ಬೆಲೆೆ ಇಲ್ಲಿಯವರೆಗೆ ಶೇ. 66 ರಷ್ಟು ಏರಿಕೆಯಾಗಿದೆ. ಬೆಳ್ಳಿ ದರ ಶೇ. 85 ರಷ್ಟು ಹೆಚ್ಚಳವಾಗಿದೆ.
ಯುಎಸ್ ಫೆಡರಲ್ ರಿಸರ್ವ್ ದರ ಕಡಿತ, ಡಾಲರ್ ಮೌಲ್ಯ ಇಳಿಕೆ ಮತ್ತು ಭಾರತೀಯ ರೂಪಾಯಿ ದುರ್ಬಲಗೊಳ್ಳುವ ನಿರೀಕ್ಷೆಗಳು ಒಟ್ಟಾಗಿ ಈ ರ‌್ಯಾಲಿಗೆ ನೆರವಾಗಿವೆ.
ಮಂಗಳವಾರ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್ ) ನಲ್ಲಿ ಚಿನ್ನ ಮತ್ತು ಬೆಳ್ಳಿ ಕುಸಿತ ಕಂಡಿದೆ.
ಯುಎಸ್ ಫೆಡರಲ್ ರಿಸರ್ವ್ ಈ ತಿಂಗಳು ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಯಿತ್ತು. ಜೊತೆಯಲ್ಲಿ ಫೆಡ್ ನಾಯಕತ್ವದಲ್ಲಿನ ಬದಲಾವಣೆಗಳ ಬಗ್ಗೆಯೂ ಊಹಾಪೋಹಾಗಳಿದ್ದವು. ಹಾಗಾಗಿ ಈ ಹಿನ್ನಡೆ ಕಂಡು ಬಂದಿದೆ.
ಸೋಮವಾರ ಚಿನ್ನ ಆರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಸ್ವಲ್ಪ ಹಿನ್ನಡೆ ಕಂಡಿದೆ. ಇತ್ತೀಚೆಗೆ ಯುಎಸ್ ಡಾಲರ್ ವಿರುದ್ಧ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದ ರೂಪಾಯಿ ದುರ್ಬಲಗೊಂಡಿರುವುದು ದೇಶೀಯ ಮಾರುಕಟ್ಟೆಯಲ್ಲಿ ಈ ಲೋಹಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
2025ರಲ್ಲಿ ಬೆಳ್ಳಿ ಬೆಲೆ ಈಗಾಗಲೇ ದ್ವಿಗುಣಗೊಂಡಿದ್ದು, ಪ್ರಸ್ತುತ ಪ್ರತಿ ಕೆಜಿಗೆ 1.80 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಎಲ್ಲರ ಗಮನ ಈಗ ಕೆಜಿಗೆ 2 ಲಕ್ಷವನ್ನು ತಲುಪಬಹುದೆಂಬ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.