7 rupees

News @ your fingertips

ಗಾಂಧಿV/S ಗಾಂಧಿ ವರುಣ್ ಗಾಂಧಿ ನಕಾರ

ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಬಿಜೆಪಿ ನೀಡಿದ ಸಲಹೆಯನ್ನು ಸಂಸದ ವರುಣ್ ಗಾಂಧಿ ನಿರಾಕರಿಸಿದ್ದಾರೆ.
ವರುಣ್ ಗಾಂಧಿ ಹಾಲಿ ಸಂಸದರಾಗಿದ್ದು, ಪಿಲಿಭಿತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಆ ಕ್ಷೇತ್ರದಿಂದ ವರುಣ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅಲ್ಲಿ ಜಿತಿನ್ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ರಾಯ್‌ಬರೇಲಿ 2004ರಿಂದ ಕಾಂಗ್ರೆಸ್ ಬಿಗಿ ಹಿಡಿತದಲ್ಲಿರುವ ಕ್ಷೇತ್ರ. ಸಂಸದರಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕಳೆದ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಖಾಲಿ ಸ್ಥಾನಕ್ಕೆ ಸದ್ಯ ಪ್ರಿಯಾಂಕ ಗಾಂಧಿ ವಾದ್ರ ಅವರ ಹೆಸರು ಕೇಳಿಬರುತ್ತಿದೆ.ಅದು ನಿಜವಾದರೆ ಗಾಂಧಿ ಕುಟುಂಬವನ್ನು ಎದುರಿಸಲು ಅದೇ ಕುಟುಂಬದ ಕುಡಿ ವರುಣ್ ಗಾಂಧಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಬಯಸಿತ್ತು. ಅದರೆ ವರುಣ್ ಗಾಂಧಿ ಅವರು ಗಾಂಧಿ ವಿರುದ್ಧ ಗಾಂಧಿ ಹೋರಾಟಕ್ಕೆ ಸಿದ್ದರಾಗಿಲ್ಲ ಎಂದು ತಿಳಿದು ಬಂದಿದೆ.
ಬಿಜೆಪಿಯಿಂದ ಉಚ್ಛಾಟನೆಗೊಂಡ ನಾಯಕಿ ನೂಪುರ ಶರ್ಮ ಅವರ ಹೆಸರು ಕೂಡಾ ಈ ನಡುವೆ ಕೇಳಿ ಬರುತ್ತಿದೆ.
ಅದರೆ ಸದ್ಯ ಯಾವುದೇ ಅಂತಿಮ ತೀರ್ಮಾನ ಪಕ್ಷದ ಮಟ್ಟದಲ್ಲಿ ನಡೆದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

× Subscribe us