News @ your fingertips
News @ your fingertips
ಬಿಜೆಪಿ ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಖ್ಯಾತ ನ್ಯಾಯವಾದಿ ಉಜ್ವಲ್ ನಿಕಂ ಅವರನ್ನು ಹೆಸರಿಸಿದೆ.
ಉಜ್ವಲ್ ನಿಕಂ ಅವರು 26/11 ಉಗ್ರಗಾಮಿ ದಾಳಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಸರಕಾರದ ವಿಶೇಷ ಪ್ರಾಸಿಕ್ಯೂಟರ್‌ರಾಗಿ ಕಾರ್ಯನಿರ್ವಹಿಸಿದ್ದರು. ಉಗ್ರಗಾಮಿ ದಾಳಿಯ ಪ್ರಮುಖ ರೂವಾರಿ ಅಜ್ಮಲ್ ಕಸಬ್‌ಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪೂನಮ್ ಮಹಾಜನ್‌ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ನಾಯಕರಾಗಿದ್ದ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಅವರು ಕಳೆದ 2 ಬಾರಿ ಈ ಕ್ಷೇತ್ರದಿಂದ ಸಂಸದರಾಗಿದ್ದರು.
ಉಜ್ವಲ್ ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಮುಂಬೈ ಘಟಕದ ಅಧ್ಯಕ್ಷೆ , ಧಾರಾವಿ ಕ್ಷೇತ್ರದ ಶಾಸಕಿ ವರ್ಷಾ ಗಾಯಕ್‌ವಾಡ್ ಸ್ಪರ್ಧಿಸಲಿದ್ದಾರೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ