News @ your fingertips
News @ your fingertips
ಆಲ್ಭಾಬೇಟ್ ಮಾಲೀಕತ್ವದ ಗೂಗಲ್ನಿಂದ ಕ್ರೋಮ್ ಅನ್ನು ಖರೀದಿಸಲು ಪರ್ಪ್ಲೆಕ್ಸಿಟಿ ಎಐ ಪ್ರಸ್ತಾವ ಸಲ್ಲಿಸಿದೆ.
34.5 ಬಿಲಿಯನ್ ಡಾಲರ್ ನಗದು ನೀಡಿ ಕ್ರೋಮ್ ಖರೀಸಲು ಪರ್ಪ್ಲೆಕ್ಸಿಟಿ ಎಐ ಆಸಕ್ತಿ ತಳೆದಿದೆೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಮಂಗಳವಾರ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ವಲಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪರ್ಪ್ಲೆಕ್ಸಿಟಿ ಎಐ ಇಂಟರ್ನೆಟ್ನ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪ್ಲಾಟ್ಫಾರ್ಮ್ಗಳಲ್ಲಿ ಒಂದರಲ್ಲಿ ಹಿಡಿತ ಸಾಧಿಸಲು ಈ ಪ್ರಕ್ರಿಯೆಗೆ ಮುಂದಾಗಿದೆ. ಜಾಗತಿಕ ಬ್ರೌಸರ್ ಮಾರುಕಟ್ಟೆಯಲ್ಲಿ ಮಹತ್ತರ ಪಾಲು ಹೊಂದಿರುವ ಕ್ರೋಮ್, ದೀರ್ಘಕಾಲದಿಂದ ಗೂಗಲ್ಗೆ ಕಾರ್ಯತಂತ್ರದ ಆಸ್ತಿಯಾಗಿದ್ದು, ಅದರ ಜಾಹೀರಾತು, ಹುಡುಕಾಟ ಮತ್ತು ಡೇಟಾ-ಚಾಲಿತ ಸೇವೆಗಳನ್ನು ಬೆಂಬಲಿಸುತ್ತಿದೆ.
ಪರ್ಪ್ಲೆಕ್ಸಿಟಿಯ ಪ್ರಸ್ತಾವನೆಯು ಕ್ರೋಮ್ನ ಓಪನ್-ಸೋರ್ಸ್ ಕ್ರೋಮಿಯಂ ಕೋಡ್ ಅನ್ನು ನಿರ್ವಹಿಸುವುದು, ಎರಡು ವರ್ಷಗಳಲ್ಲಿ 3 ಬಿಲಿಯನ್ಡಾಲರ್ ಹೂಡಿಕೆ ಮಾಡುವುದು ಮತ್ತು ಡೀಫಾಲ್ಟ್ ಸರ್ಚ್ ಎಂಜಿನ್ ಬದಲಾಯಿಸದಿರುವುದನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಈ ಖರೀದಿಗೆ ಬೆಂಬಲವಾಗಿ ಹಲವು ಹೂಡಿಕೆ ಕಂಪೆನಿಗಳು ನೆರವಿಗೆ ಮುಂದೆ ಬಂದಿವೆಯಾದರೂ , ಯಾವುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ