7 rupees

News @ your fingertips

‘ಕೊರಗಜ್ಜ ’ತಂಡದಿಂದ ಅದ್ದೂರಿಯ ಕೋಲ

ಕರಾವಳಿ ಭಾಗದ ದೈವ ದೇವರ ಕುರಿತ ಸಿನಿಮಾಗಳು ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಈಗ ಸೇರಲಿರುವ ಮತ್ತೊಂದು ಚಿತ್ರ ಕೊರಗಜ್ಜ.
ನಿರ್ದೇಶಕ ಸುಧೀರ್ ಅತ್ತಾವರ ಅವರ ಹೊಸ ಪಾನ್ ಇಂಡಿಯಾ ಚಿತ್ರ ಕೊರಗಜ್ಜ ಆರಂಭದಿಂದಲೂ ಸುದ್ದಿಯಲ್ಲಿದ್ದ ಚಿತ್ರ . ಈಗ ಹೊಸ ಪ್ರಯೋಗದ ಮೂಲಕ ಬಿಡುಗಡೆ ಮುನ್ನವೇ ಸದ್ದಿಗೆ ರೆಡಿಯಾಗುತ್ತಿದೆ.
ಚಿತ್ರ ಬಿಡುಗಡೆ ಇನ್ನೂ ಕೆಲವೇ ದಿನಗಳು ಉಳಿದಿರುವಂತೆ ಚಿತ್ರತಂಡ ಮಂಗಳೂರಿನಲ್ಲಿ ಅದ್ದೂರಿಯ ಕೊರಗಜ್ಜ ಕೋಲ ಸೇವೆಗೆ ಮುಂದಾಗಿದೆ.
ನವೆಂಬರ್ 11 ಮಂಗಳೂರಿನ ಮಾರ್ನಮಿ ಕಟ್ಟೆಯಲ್ಲಿ ಕೊರಗಜ್ಜನ ಅದ್ದೂರಿ ಕೋಲಕ್ಕೆ ಸಿದ್ದತೆಗಳು ನಡೆದಿವೆ.
ಚಿತ್ರ ತಂಡದ ಪ್ರಮುಖ ನಟರಾದ ಜೈ ಜಗದೀಶ್, ಶೃತಿ , ಭವ್ಯ , ವಿಜಯಲಕ್ಷ್ಮಿಸಿಂಗ್ , ತಂತ್ರಜ್ಞರು ಭಾಗವಹಿಸಲಿದ್ದಾರೆ.
ಅದ್ದೂರಿಯಾಗಿ ಮೂಡಿ ಬಂದಿರುವ ಈ ಚಿತ್ರ ಪ್ಯಾನ್ ಇಂಡಿಯಾದಲ್ಲಿ ಏಕ ಕಾಲಕ್ಕೆ ಬಿಡುಗಡೆಗೊಳಿಸಲು ಚಿತ್ರದ ನಿರ್ಮಾಪಕರಾಗಿರುವ ತ್ರಿವಿಕ್ರಮ ಸಫಲ್ಯ ಯೋಜನೆ ರೂಪಿಸಿದ್ದಾರೆ.
ಇದೇ ವೇಳೆಗೆ ದೇಶದ ಪ್ರಮುಖ ಮಾಧ್ಯಮದವರೊಂದಿಗೆ ಸುದ್ದಿಗೋಷ್ಡಿಯನ್ನು ಮಂಗಳೂರಿನಲ್ಲಿ ಆಯೋಜಿಸಿದ್ದಾರೆ. ಅವರಿಗೆ ಕೊರಗಜ್ಜ ಕೋಲ ವೀಕ್ಷಿಸಲು ಅವಕಾಶ ಮಾಡಿಕೊಡುವ ಇರಾದೆಯನ್ನು ಹೊಂದಿದ್ದಾರೆ.