7 rupees

News @ your fingertips

ಕೊಚ್ಚಿನ್ ಶಿಪ್‌ಯಾರ್ಡ್ ಶೇ.5 ಬಂಡವಾಳ ಹಿಂತೆಗೆತ

ಕೇಂದ್ರ ಸರಕಾರದ ಉದ್ಯಮವಾಗಿರುವ ಕೊಚ್ಚಿನ್ ಶಿಪ್‌ಯಾರ್ಡ್‌ನ ಶೇ.5ರಷ್ಟು ಬಂಡವಾಳ ಹಿಂತೆಗೆಯಲು ಸರಕಾರ ನಿರ್ಧರಿಸಿದೆ.
ಆಫರ್ ಫಾರ್ ಸೇಲ್ ( ಒಎಫ್‌ಸಿ ) ಮೂಲಕ ತನ್ನ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಯೋಜಿಸಿದೆ. ಪ್ರತಿಯೊಂದು ಷೇರಿಗೆ 1540 ರೂ. ನಿಗದಿಪಡಿಸಲಾಗಿದೆ.
ಆ 16ರಂದು ನಾನ್‌ರಿಟೇಲರ್‌ಗಳಿಗೆ ಹಾಗೂ ಆ.17ರಂದು ರಿಟೇಲರ್ ಹೂಡಿಕೆದಾರರಿಗೆ ಒಎಫ್‌ಸಿ ತೆರೆದುಕೊಳ್ಳಲಿದೆ.
ಕೊಚ್ಚಿನ್ ಶಿಪ್‌ಯಾರ್ಡ್‌ನ ಮುಖ್ಯ ಅದಾಯ ಶಿಪ್ ನಿರ್ಮಾಣ ಕಾರ್ಯ. ಸಂಸ್ಥೆಯ ಅದಾಯದಲ್ಲಿ ಕಳೆದ ವರ್ಷ ಶೇ.62 ರಷ್ಟು ವೃದ್ದಿಯಾಗಿತ್ತು.

× Subscribe us