News @ your fingertips
News @ your fingertips
ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸುವ ಸರಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಟೆಕ್ಕಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಸರಕಾರದ ನಿಲವನ್ನು ಪ್ರತಿಭಟಿಸಿ , ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಸರಕಾರದ ಪರವಾಗಿ ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿ ಮಂಜುನಾಥ್ ವಿಷಯವನ್ನು ಸರಕಾರದ ಗಮನಕ್ಕೆ ಭರವಸೆಯನ್ನು ನೀಡಿದರು.
ದಿನಕ್ಕೆ 3 ಗಂಟೆ ಹೆಚ್ಚುವರಿ ಕೆಲಸ ಮಾಡುವ ಪ್ರಸ್ತಾವವನ್ನು ಸರಕಾರ ರೂಪಿಸಿದೆ. ಈಗ ದಿನಕ್ಕೆ 9 ಗಂಟೆ ಕೆಲಸ ಅವಧಿಯೆಂದು ನಿಗದಿ ಪಡಿಸಿದ್ದರೂ , 3 ಗಂಟೆ ಕಾಲ ಓವರ್ ಟೈಮ್ ಕೆಲಸಕ್ಕೆ ಹೊಸ ಕಾನೂನು ಅವಕಾಶ ಕಲ್ಪಿಸಲಿದೆ. ಅಂದರೆ ಉದ್ಯೋಗಿಗಳನ್ನು ದಿನಕ್ಕೆ 12 ಗಂಟೆ ದುಡಿಸಲು ಈ ಕಾನೂನು ಅವಕಾಶ ಕಲ್ಪಿಸಿಕೊಡಲಿದೆ.
ಈ ಪ್ರಸ್ತಾವಿತ ಕಾನೂನು ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದ್ದು , ಹಲವು ವಲಯಗಳಿಂದ ವಿರೋಧ ವೂ ವ್ಯಕ್ತವಾಗಿದೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ