News @ your fingertips
News @ your fingertips
ಕೇಂದ್ರ ಸರಕಾರದ ಅಧೀನದ ದೂರದರ್ಶನ ತನ್ನ ಲೋಗೋ ಬದಲಾಯಿಸಿಕೊಂಡಿದೆ.
ಕೆಂಪು ಬಣ್ಣ ಹೊಂದಿದ್ದ ಲೋಗೋಗೆ ಈಗ ಕಿತ್ತಳೆ ಬಣ್ಣ ಬಳಸಲಾಗಿದೆ.
ದೂರದರ್ಶನ ಈ ಹಿಂದೆದಿಗಿಂತಲೂ ವಿನೂತನ ರೀತಿಯ ಸುದ್ದಿ ಪ್ರಸಾರ ಯಾನ ಆರಂಭಿಸಿದೆ. ಅಧಿಕ ವೇಗದಲ್ಲಿ ,ನಿಖರವಾದ ವಿಚಾರ,ಸತ್ಯ ಸುದ್ದಿ ಬಿತ್ತರಿಸಲಿದೆ. ದೂರದರ್ಶನ ತನ್ನ ಹಿಂದಿನ ಮೌಲ್ಯಗಳನ್ನು ಉಳಿಸಿಕೊಂಡು, ಜನರ ನಂಬಿಕೆಯಂತೆ ಕಾರ್ಯ ನಿರ್ವಹಿಸಲಿದೆ. ಇದೀಗ ನೂತನ ಅವತಾರದಲ್ಲಿ ಲಭ್ಯವಿದೆ ಎಂದು ದೂರದರ್ಶನ ಸಾಮಾಜಿಕ ತಾಣದಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
೧೦೬೯ ಸೆ.೧೫ರಂದು ಪ್ರಸಾರ ಆರಂಭಿಸಿದ್ದ ದೂರದರ್ಶನ ೧೯೬೫ನಲ್ಲಿ ಹೊಸ ಪ್ರಯೋಗಗಳನ್ನು ಆರಂಭಿಸಿ,ದೇಶದಾದ್ಯಂತ ಪ್ರಮುಖ ನಗರಗಳಿಗೆ ತನ್ನ ಸೇವಾ ಜಾಲವನ್ನು ವಿಸ್ತರಿಸಿಕೊಂಡಿತು.೧೯೭೬ರಲ್ಲಿ ದೂರದರ್ಶನ ಪ್ರತ್ಯೇಕವಾದ ರೂಪಿತಗೊಂಡ ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಒಳಪಟ್ಟಿತು.
ಆರಂಭದಲ್ಲಿ ಕಪ್ಪು ಬಿಳಪು ದೃಶ್ಯಗಳನ್ನು ಬಿತ್ತರಿಸುತ್ತಿದ್ದ ದೂರದರ್ಶನ ೧೯೮೨ರಲ್ಲಿ ಕಲರ್‌ಗೆ ರೂಪಾಂತರಗೊಂಡಿತು.
ಇದೀಗ ಕಿತ್ತಳೆ ಬಣ್ಣಕ್ಕೆ ಲೋಗೋ ಪರಿವರ್ತಿಸಿರುವುದು ಕೂಡಾ ಹಲವು ವಿವಾದಗಳಿಗೆ ಕಾರಣವಾಗಿದೆ. ವಿಪಕ್ಷಗಳು ದೂರದರ್ಶನವನ್ನು ಕೇಸರಿಕರಣ ಮಾಡಲಾಗಿದೆ ಎಂದು ಟೀಕಿಸಿವೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ