7 rupees

News @ your fingertips

ಒಎನ್‌ಸಿಜಿ ಸಿಂಗ್ ಅಧ್ಯಕ್ಷರಾಗಿ ಮುಂದರಿಕೆ

ದೇಶದ ಅಗ್ರಮಾನ್ಯ ತೈಲ ಮತ್ತು ಅನಿಲ ಉತ್ಪಾದಕ ಸಂಸ್ಥೆ, ನವರತ್ನಗಳಲ್ಲೊಂದಾದ ಒಎನ್‌ಜಿಸಿ ಅಧ್ಯಕ್ಷರಾದ ಅರುಣ್ ಕುಮಾರ್ ಸಿಂಗ್‌ಅವರಿಗೆ ಒಂದು ವರ್ಷದ ಅಪರೂಪದ ವಿಸ್ತರಣೆಯನ್ನು ಕೇಂದ್ರ ಸರಕಾರ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಈ ನಿರ್ಣಯವನ್ನು ಕೈಗೊಂಡಿದೆ. ಈ ನಿರ್ಣಯವನ್ನು ಉಲ್ಲೇಖಿಸಿದ ಅಧಿಕೃತ ಆದೇಶದ ನೀಡಲಾಗಿದ್ದು , 63 ವರ್ಷದ ಸಿಂಗ್ ಅವರು ಡಿಸೆಂಬರ್ 6, 2026 ರವರೆಗೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
2022 ರಲ್ಲಿ ಅವರು 60ನೇ ವಯಸ್ಸಿನಲ್ಲಿ ಒಎನ್‌ಜಿಸಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು. 60ನೇ ಪ್ರಾಯದಲ್ಲಿ ಪಿಎಸ್‌ಯುನ ಅಧ್ಯಕ್ಷರಾದುದು ಇದೇ ಮೊದಲು. ಅಂದು ಅಪರೂಪದ ನಡೆಯನ್ನು ತಳೆದಿದ್ದ ಸರಕಾರ ಈಗ ಮತ್ತೆ ಅಂತಹದೇ ನಡೆಯನ್ನು ಅನುಸರಿಸಿದೆ.