7 rupees

News @ your fingertips

ಏರು ಹಾದಿಯಲ್ಲಿ ನಿಫ್ಟಿ …


ನಿಫ್ಟಿ ಹಾಗೂ ಸೆಸ್ಸೆಕ್ಸ್ ಗುರುವಾರ ಐದನೇ ದಿನವೂ ಏರಿಕೆಯನ್ನು ಕಾಯ್ದಿರಿಸಿಕೊಂಡಿದ್ದು , ಸರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿದವು.
ಬೆಳಗ್ಗೆ ಪಾಸಿಟಿವ್ ಆಗಿ ಆರಂಭಗೊಂಡ ಮಾರುಕಟ್ಟೆ ದ್ವಿತೀಯಾರ್ಧದಲ್ಲಿ ಒಂದಿಷ್ಟು ಮಾರಾಟದ ಒತ್ತಡಕ್ಕೆ ಸಿಲುಕಿತು. ಈ ಮಧ್ಯೆ ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು.
ಸೆಸ್ಸೆಕ್ಸ್ ೮೨೧೨೯.೪೯ ಅಂಕ ಹಾಗೂ ನಿಫ್ಟಿ ೫೦ಯೂ ೨೫ ೦೭೮.೩೦ ಅಂಕಗಳನ್ನು ದಾಖಲಿಸಿತು. ಸೂಚ್ಯಂಕದ ಹೆವಿವೇಟ್‌ಗಳಾದ ಎಚ್‌ಡಿಎಫ್ ಸಿ ಬ್ಯಾಂಕ್ ಹಾಗೂ ರಿಲಯನ್ಸ್ ಬುಧವಾರದ ಏರಿಕೆಗೆ ಕಾರಣವಾದವು.
ಮಾರುಕಟ್ಟೆ ಅಂತ್ಯದ ವೇಳೆಗೆ ಸೆಸ್ಸೆಕ್ಸ್ ೧೨೬ ಅಂಕಗಳ ಏರಿಕೆಯಲ್ಲಿ ೮೧೮೬೭.೫೫ ರಲ್ಲಿ ಹಾಗೂ ನಿಫ್ಟಿ ೬೦ ಅಂಕಗಳ ಗಳಿಕೆಯೊಂದಿಗೆ ೨೫೦೧೦.೯೦ ರಲ್ಲಿ ಮುಕ್ತಾಯವಾದವು.
ಮಿಡ್‌ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ ಇಳಿಕೆ ಕಂಡು ಬಂತು. ಈ ವಿಭಾಗದಲ್ಲಿ ಮಾರಾಟ ಒತ್ತಡ ಅಧಿಕವಾಗಿದ್ದ ಕಾರಣ ನೆಗೆಟಿವ್ ಮೂಡ್ ಕಂಡು ಬಂತು. ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳ ಮೌಲ್ಯಮಾಪನ ಅಧಿಕವಾಗಿದೆ ಎನ್ನುವ ಅನುಮಾನವೂ ಇಳಿಕೆಗೆ ಕಾರಣವಾಯಿತು.

× Subscribe us