7 rupees

News @ your fingertips

ಎಲನ್ ಮಸ್ಕ್

ಎಲನ್ ಮಸ್ಕ್ ಭಾರತ ಭೇಟಿ ಸದ್ಯ ಇಲ್ಲ ವರ್ಷದ ಅಂತ್ಯಕ್ಕೆ ನಿರೀಕ್ಷೆ

ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪೆನಿ ಟೆಸ್ಲಾದ ಮುಖ್ಯಸ್ಥ ?ಎಲನ್‌ಮಸ್ಕ್ ತನ್ನ ಭಾರತ ಭೇಟಿಯನ್ನು ಮುಂದೂಡಿದ್ದಾರೆ.
ಈ ಹಿಂದೆ ನಿಗದಿಯಾದಂತೆ ಎಪ್ರಿಲ್‌೨೩ರಿಂದ ೨ ದಿನಗಳ ಕಾಲ ಮಸ್ಕ್ ಭಾರತ ಪ್ರವಾಸ ಮಾಡಬೇಕಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು. ಮಸ್ಕ್ ಜೊತೆಯಲ್ಲಿ ಟೆಸ್ಲಾದ ಸಿಇಒ ಹಾಗೂ ಹಿರಿಯ ಅಧಿಕಾರಿಗಳು ಭಾರತಕ್ಕೆ ಬರುವುದು ನಿಗದಿಯಾಗಿತ್ತು.
ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಉತ್ಪಾದನೆ ಸಂಬಂಧ ದೊಡ್ಡ ಬಂಡವಾಳ ಹೂಡಿಕೆಯನ್ನು ಮಸ್ಕ್ ಈ ಸಂದರ್ಭದಲ್ಲಿ ಪ್ರಕಟಿಸುವ ನಿರೀಕ್ಷೆ ಇತ್ತು.
ಟೆಸ್ಲಾ ಕಂಪೆನಿಯಲ್ಲಿನ ಕೆಲವೊಂದು ಅತಿ ಜರೂರಿ ಕಾರ್ಯಗಳಿಂದ ಪ್ರವಾಸವನ್ನು ಮಂದೂಡುವ ಅನಿವಾರ್ಯತೆ ಎದುರಾಗಿದೆ. ವರ್ಷದ ಅಂತ್ಯಕ್ಕೆ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಎಲನ್ ಮಸ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

× Subscribe us