7 rupees

News @ your fingertips

ಉಳಿತಾಯ ಇನ್ನೂ ಸುಲಭ , 250 ರೂ. ಎಸ್‌ಐಪಿ

ಸದ್ಯದಲ್ಲೇ 250 ರೂ.ಗಳ ಮ್ಯೂಚುವಲ್ ಫಂಡ್ ಎಸ್‌ಐಪಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹೇಳಿದ್ದಾರೆ.
ಸಿಐಐ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು , ಎಲ್ಲ ವರ್ಗದ ಜನರನ್ನು ತಲುಪುವ ನಿಟ್ಟಿನಲಿಲ ಇಂತಹ ಕ್ರಮಗಳು ಅಗತ್ಯ ಎಂದು ಹೇಳಿದರು.
ಮ್ಯೂಚುವಲ್‌ಫಂಡ್ ಆಸೋಸಿಯೆಷನ್ ಜೊತೆಯಲ್ಲಿ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಜನರಲ್ಲಿ ಹೆಚ್ಚಿನ ಉಳಿತಾಯ ಆಸಕ್ತಿಯನ್ನು ಬೆಳೆಸುವುದರ ಜೊತೆಯಲ್ಲಿ ತಂತ್ರಜ್ಞಾನ ಸೇವೆಯೂ ಜನಸಾಮಾನ್ಯರಿಗೆ ತಲುಪುವಂತಾಗಬೇಕು ಎಂದು ಅವರು ವಿವರಿಸಿದರು.
ಸದ್ಯ ಎಲ್ಲ ಮ್ಯೂಚುವಲ್ ಫಂಡ್‌ಗಳಲ್ಲಿ 500 ರೂ. ಎಸ್‌ಐಪಿ ಕನಿಷ್ಠ ಹೂಡಿಕೆಯಾಗಿದೆ. 250 ರೂ. ಎಸ್‌ಐಪಿ ಹೂಡಿಕೆ ಆರಂಭವಾದರೆ ಜನಸಾಮಾನ್ಯರಿಗೂ ಅನುಕೂಲವಾಗಲಿದ್ದು , ದೊಡ್ಡ ಪ್ರಮಾಣದಲ್ಲಿ ಉಳಿತಾಯ ಹರಿದು ಬರಲಿದೆ ಎನ್ನುವುದು ಸೆಬಿ ಅಭಿಪ್ರಾಯವಾಗಿದೆ.

× Subscribe us