News @ your fingertips
News @ your fingertips
ಭಾರತದ ಅಗ್ರ ಮಾನ್ಯ ಐಟಿ ಕಂಪೆನಿಗಳಲ್ಲೊಂದಾದ ಇನ್ಫೋಸಿಸ್ 2024-25 ಸಾಲಿನ ಅದಾಯ ಮಾರ್ಗಸೂಚಿಯನ್ನು ಶೇ.1-3ಕ್ಕೆ ಇಳಿಸಿಕೊಂಡಿದೆ.
ಜಾಗತಿಕ ಮಟ್ಟದ ವಿದ್ಯಮಾನಗಳನ್ನು ಅನುಸರಿಸಿ ಸಂಸ್ಥೆ ತನ್ನ ಆದಾಯ ನಿರೀಕ್ಷೆಯನ್ನು ಕಡಿಮೆಗೊಳಿಸಿದೆ. ಇದು ಮಾರುಕಟ್ಟೆ ತಜ್ಞರ ನಿರೀಕ್ಷೆಗಿಂತಲೂ ಕಡಿಮೆಯಾಗಿದೆ.
ಈ ಕಾರಣಕ್ಕೆ ಅಮೆರಿಕ ಸ್ಟಾಕ್ ಎಕ್ಸ್‌ಚೇಂಚ್‌ನಲ್ಲಿ ಇನ್ಫೋಸಿಸ್ ಎಡಿಆರ್ ಷೇರುಗಳು ಸುಮಾರು ಶೇ.7ರಷ್ಟು ಕುಸಿದು ಬಳಿಕ ಚೇತರಿಕೊಂಡಿವೆ.
ಇದೇ ಹೊತ್ತಿನಲ್ಲಿ ಇನ್ಫೋಸಿಸ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕೂಡಾ ಕಡಿತಗೊಳಿಸಿದೆ. ಸಂಸ್ಥೆಯ 23 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗಿಗಳ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.
ಇನ್ಫೋಸಿಸ್ ಭಾರತದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪೆನಿಯಾಗಿದೆ. ಕಳೆದ ಐದು ತ್ರೈಮಾಸಿಕದಲ್ಲಿ ಸಂಸ್ಥೆ 5 ಬಾರಿ ತನ್ನ ಅದಾಯ ಮಾರ್ಗಸೂಚಿಯನ್ನು ಬದಲಾಯಿಸಿಕೊಂಡಿದೆ.
ಇಂದು ಸಂಸ್ಥೆ 2023-2024 ಅರ್ಥಿಕ ವರ್ಷದ ಕೊನೆಯ ತ್ರೈ ಮಾಸಿಕ ಫಲಿತಾಂಶ ಪ್ರಕಟಿಸಿದೆ. ಈ ಹಿಂದಿನ ತ್ರೈಮಾಸಿಕಗಳಿಗೆ ಹೋಲಿಸಿದರೆ ಲಾಭಾಂಶ ಪ್ರಮಾಣ ಉತ್ತಮಗೊಂಡಿದೆ. ಕಳೆದ ಮೂರು ತಿಂಗಳಲ್ಲಿ ಕಂಪೆನಿ 37933 ಕೋ.ರೂಗಳ ಆದಾಯ ಹೊಂದಿದ್ದು , 7969 ಕೋ.ರೂ. ಲಾಭ ದಾಖಲಿಸಿದೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ