7 rupees

News @ your fingertips

ಇನ್ಫಿ ಜಿಎಸ್‌ಟಿ ನೋಟಿಸ್ ವಾಪಾಸ್

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಕಂಪೆನಿಗೆ ಜಿಎಸ್‌ಟಿ ತೆರಿಗೆ ಸಂಬಂಧ ನೀಡಲಾಗಿದ್ದ ಶೋಕಾಸ್ ಪೂರ್ವ ನೋಟಿಸನ್ನು ಕರ್ನಾಟಕ ರಾಜ್ಯ ಜಿಎಸ್‌ಟಿ ಕಾರ್ಯಪಡೆ ಹಿಂಪಡೆದುಕೊಂಡಿದೆ.
ತೆರಿಗೆ ಸಂಬಂಧ ವಿಚಾರಗಳನ್ನು ಕೇಂದ್ರ ಜಿಎಸ್‌ಟಿ ಡಿಜಿಜಿಐ ಅವರೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿದೆ.
ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ನೀಡಿದ ಮಾಹಿತಿಯಲ್ಲಿ ಇನ್ಫೋಸಿಸ್ ಕಂಪೆನಿ ಈ ವಿಚಾರವನ್ನು ತಿಳಿಸಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿಗೆ ೩೨,೪೦೩ ಕೋ.ರೂ. ಜಿಎಸ್‌ಟಿ ತೆರಿಗೆಯನ್ನು ಪಾವತಿಸುವಂತೆ ಜಿಎಸ್‌ಟಿ ಗುಪ್ತಚರ ಪ್ರಧಾನ ನಿರ್ದೇಶನಾಲಯದಿಂದ ನೋಟಿಸ್ ಜಾರಿ ಮಾಡಲಾಗಿತ್ತು.

× Subscribe us