7 rupees

News @ your fingertips

ಅದಾನಿ ಎಂಟರ್‌ಪ್ರೈಸಸ್ ಲಾಭ ಶೇ.೧೧೬ ಹೆಚ್ಚಳ

ಅದಾನಿ ಸಮೂಹದ ಮೂಲ ಸೌಕರ್ಯ ಅಭಿವೃದ್ದಿ ಸಂಸ್ಥೆಯಾಗಿರುವ ಅದಾನಿ ಎಂಟರ್‌ಪ್ರೈಸಸ್ ಈ ಅರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ೧೪೫೪ ಕೋ.ರೂ.ಗಳ ನಿವ್ವಳ ಲಾಭ ದಾಖಲಿಸಿದೆ.
ಕಳೆದ ಸಾಲಿನ ಇದೇ ಅವಧಿಯಲ್ಲಿ ೬೭೪ಕೋ.ರೂ. ಲಾಭ ಗಳಿಸಿದ್ದು , ಅದನ್ನು ಹೋಲಿಸಿದರೆ ಈ ಬಾರಿ ಶೇ.೧೧೬ ರಷ್ಟು ಹೆಚ್ಚಳವಾಗಿದೆ.
ಇದೇ ಹೊತ್ತಿನಲ್ಲಿ ಅದಾನಿ ಎಂಟರ್‌ಪ್ರೈಸಸ್‌ನಿಂದ ಆಹಾರ ಮತ್ತು ಎಫ್‌ಎಂಜಿಸಿ ವಿಭಾಗವನ್ನು ಬೇರ್ಪಡಿಸಲು ಒಪ್ಪಿಗೆ ನೀಡಲಾಗಿದೆ. ಈ ವಿಭಾಗವೂ ಅದಾನಿ ವಿಲ್ಮಾರ್ ಲಿಮಿಟೆಡ್‌ನಲ್ಲಿ ವಿಲೀನ ಗೊಳ್ಳಲಿದೆ. ಅದಾನಿ ಎಂಟರ್‌ಪ್ರೈಸಸ್‌ನ ಪ್ರತಿ ೫೦೦ ಷೇರುಗಳಿಗೆ ಅದಾನಿ ವಿಲ್ಮಾರ್‌ನ ೨೫೧ ಷೇರುಗಳು ಹೂಡಿಕೆದಾರರಿಗೆ ಲಭ್ಯವಾಗಲಿವೆ .

 

× Subscribe us