7 rupees

News @ your fingertips

ಸಾವಯವ ಕೃಷಿ ಯಾಕೆ ಕಷ್ಟ ?

ಸಾವಯವ ಕೃಷಿ ಯಾಕೆ ಕಷ್ಟ ?

ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಷ್ಟವೇ ?
ಹೀಗೊಂದು ಪ್ರಶ್ನೆ ಆಗಾಗ ಕೇಳಿ ಬರುವುದಿದೆ.
ಆದರೆ ವಿಶ್ವದ ವಿದ್ಯಮಾನವನ್ನು ಗಮನಿಸಿದಾಗ ಈ ಪ್ರಶ್ನೆಯಲ್ಲಿ ಹುರುಳಿಲ್ಲ ಎನ್ನುವುದು ಸ್ಪಷ್ಟ.
ಸ್ಥಳೀಯವಾಗಿ ನಾವು ವಿಷಯದಲ್ಲಿ ಚಿಂತನೆ ಮಾಡಿದರೆ , ಕೆಲವೊಮ್ಮೆ ಮಾರುಕಟ್ಟೆ ಕಷ್ಟ ಅನಿಸುವುದು ಇದೆ.
ಅದರೆ ಇತ್ತೀಚಿನ ದಿನಗಳಲ್ಲಿ ಸಾವಯವ ಉತ್ಪನ್ನಗಳ ಬಗ್ಗೆ ಹೆಚ್ಚುತ್ತಿರುವ ಅರಿವು , ಭವಿಷ್ಯದಲ್ಲಿ ದೊಡ್ಡ ಮಾರುಕಟ್ಟೆಯ ಅಶಾವಾದವನ್ನು ಮೂಡಿಸುತ್ತಿದೆ.
ಕೃಷಿ ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ದಿ ಪ್ರಾಧಿಕಾರ ( ಎಪಿಇಡಿಎ) ಕಳೆದ ಮಾರ್ಚ್ ಹೊತ್ತಿಗೆ ಬಿಡುಗಡೆ ಮಾಡಿರುವ ಅಂಕಿ- ಅಂಶಗಳ ಪ್ರಕಾರ ನಮ್ಮಲ್ಲಿನ 154 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಮಾರು 5.4 ಮಿಲಿಯನ್ ( ಶೇ. 3.5) ಪ್ರದೇಶ ಮಾತ್ರ ಸಾವಯವ ಉತ್ಪನ್ನಗಳ ಬಗ್ಗೆ ಪ್ರಮಾಣೀಕರಿಸುವ ಸಾವಯವ ಉತ್ಪಾದನೆ ಕುರಿತ ರಾಷ್ಟೀಯ ಕಾರ್ಯಕ್ರಮದಡಿ ( ಎನ್‌ಪಿಓಪಿ) ನೊಂದಾಯಿಸಲ್ಪಟ್ಟಿದೆ. ಅಶ್ಚರ್ಯದಾಯಕ ವಿಚಾರವೆಂದರೆ ವಿಶ್ವದಲ್ಲಿ ಅತೀ ಹೆಚ್ಚು ಸಾವಯವ ಕೃಷಿಕರು ಇರುವುದು ಭಾರತದಲ್ಲಿ . 1.4 ಮಿಲಿಯನ್. ಅದರೆ ಅತೀ ಹೆಚ್ಚು ಸಾವಯವ ಕೃಷಿ ವಲಯ ಇರುವುದು ಅಸ್ಟ್ರೇಲಿಯಾದಲ್ಲಿ , 36 ಮಿಲಿಯನ್ ಹೆಕ್ಟೇರ್.
2022-23ರಲ್ಲಿ ಭಾರತದಲ್ಲಿ ಸುಮಾರು 2.9 ಮಿಲಿಯನ್ ಟನ್ ಪ್ರಮಾಣೀಕೃತ ಸಾವಯತ ಉತ್ಪನ್ನಗಳನ್ನು ಬೆಳಸಲಾಗಿದೆ. ಇದರಲ್ಲಿ ಅಹಾರ ಪದಾರ್ಥಗಳು , ಎಣ್ಣೆ ಕಾಳುಗಳು, ಹತ್ತಿ , ಚಹಾ ಸೇರಿದೆ. ಇದೇ ಸಮಯದಲ್ಲಿ ಭಾರತ ಸುಮಾರು 5525 ಕೋಟಿ ಮೌಲ್ಯದ ಸಾವಯವ ಉತ್ಪನ್ನಗಳನ್ನು ರಫ್ತು ಮಾಡಿದೆ. ನಿರೀಕ್ಷೆಗೆ ಮೀರಿ ಈ ವಹಿವಾಟು ನಡೆದಿದೆ. ಭಾರತಗಿಂತ ವಿದೇಶಗಳಲ್ಲಿ ಸಾವಯವ ಉತ್ಪನ್ನಗಳಿಗೆ ಅಧಿಕ ಬೇಡಿಕೆ ಸೃಷ್ಟಿಯಾಗುತ್ತಿದೆ. ಅಮೆರಿಕಾ , ಜರ್ಮನಿ , ಫ್ರಾನ್ಸ್‌ಗಳಲ್ಲಿ ಜನರು ಅತ್ಯಧಿಕ ಪ್ರಮಾಣದಲ್ಲಿ ಸಾವಯವ ಉತ್ಪನ್ನಗಳಿಗೆ ಆಸಕ್ತರಾಗಿದ್ದಾರೆ.
ಭಾರತದಲ್ಲಿ ಜನರು ಇನ್ನೂ ಕೂಡಾ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಇದಕ್ಕೆ ಮೂಲ ಕಾರಣಗಳು : ಜನರಿಗೆ ಸಾವಯವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು.
ಮುಕ್ತ ಮಾರುಕಟ್ಟೆಯಲ್ಲಿ ಇತರ ಉತ್ಪನ್ನಗಳು ಅತಿ ಕಡಿಮೆ ಬೆಲೆಗೆ ಲಭ್ಯವಾಗುವುದು.
ಸಾವಯವ ಉತ್ಪನ್ನಗಳು ನಿರೀಕ್ಷೆ ಮಟ್ಟದಲ್ಲಿ ಲಭ್ಯವಾಗದಿರುವುದು.
ನಿಧಾನವಾಗಿ ಸಾವಯವ ಉತ್ಪನ್ನಗಳ ಕಡೆಗೆ ಜನರ ಒಲವು ವ್ಯಕ್ತವಾಗುತ್ತಿದ್ದರೂ , ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ನಾವು ಇನ್ನೂ ಇಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.
ಕೆಲವೊಮ್ಮೆ ಸಾವಯವ ಹೆಸರಿಯಲ್ಲಿ ರಾಸಾಯನಿಕಯುಕ್ತ ಉತ್ಪನ್ನಗಳು ಮಾರುಕಟ್ಟೆ ಪ್ರವೇಶ ಮಾಡುತ್ತಿರುವ ಕಾರಣ ಜನರಿಗೆ ಉತ್ಪನ್ನಗಳ ತಾಜಾತನದ ಬಗ್ಗೆಯೂ ಸಂಶಯಗಳು ಬರುವುದುಂಟು. ಹಾಗಾಗಿ ಸಾವಯವ ಎಂದಾಕ್ಷಣ ಜನರು ದೂರ ಹೋಗುವ ನಿದರ್ಶನಗಗಳು ಇವೆ.
ದೊಡ್ಡ ಪ್ರಮಾಣದಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಸುವ ವ್ಯವಸ್ಥೆಯನ್ನು ಪ್ರಮಾಣೀಕರಿಸುವ ಅವಕಾಶ ಇದೆಯಾದರೂ ಸಣ್ಣ ಮಟ್ಟದಲ್ಲಿ ಅದು ಇನ್ನೂ ಸಾಧ್ಯವಾಗದಿರುವುದು ಅಥವಾ ರೈತರು ಆ ಬಗ್ಗೆ ಚಿಂತಿಸದಿರುವುದು ಕೂಡಾ ಗಮನಿಸಬೇಕಾದ ಅಂಶ.

× Subscribe us