7 rupees

News @ your fingertips

ಮನಸ್ಸು ಮಾಡಿ , ಕೃಷಿ ಎಲ್ಲಕ್ಕಿಂತ ಲಾಭದಾಯಕ

ಮನಸ್ಸು ಮಾಡಿ , ಕೃಷಿ ಎಲ್ಲಕ್ಕಿಂತ ಲಾಭದಾಯಕ

ಕೃಷಿಯಲ್ಲಿ ಲಾಭ ಇಲ್ಲ, ದುಡಿದಷ್ಟು ಅದಾಯವೂ ಬರಲ್ಲ ಅನ್ನೋದು ಸಾರ್ವತ್ರಿಕವಾಗಿರುವ ಭಾವನೆ. ಇದು ನಿಜನಾ ?
ಕೆಲವು ಪರಿಸ್ಥಿತಿಗಳಲ್ಲಿ ಇದು ನಿಜ ಅನಿಸಿದರೂ , ಒಟ್ಟಾರೆ ಕೃಷಿ ಇಂದು ಕೂಡಾ ಲಾಭದಾಯಕ ವ್ಯವಹಾರವೇ ಆಗಿದೆ.
ಕೃಷಿ ಅನ್ನೋದು ಮುಖ್ಯವಾಗಿ ಹವಾಮಾನವನ್ನು ಅಧರಿಸಿಕೊಂಡ ಕ್ಷೇತ್ರವಾಗಿರುವ ಕಾರಣ ಇಲ್ಲಿ ಲಾಭ ನಷ್ಟವನ್ನು ಸುಲಭದಲ್ಲಿ ಂಅದಾಜಿಸಲು ಕಷ್ಟ. ಹಾಗಾಗಿ ರೈತರು ಕೃಷಿಯಲ್ಲಿ ನಷ್ಟ ಅನೋನ ಭಾವನೆ ಹೊಂದಿದ್ದಾರೆ.
ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಸುಲಭ ಉತ್ತರ . ನಿಜ , ಸಾಧ್ಯವಿದೆ. ಅದರೆ ಹೊಸ ಸಾಧ್ಯತೆಗಳತ್ತ ಹೆಚ್ಚಿನ ಗಮನ ನೀಡಬೇಕಿದೆ. ಹಳೆಯ ಪದ್ದತಿ ಜೊತೆಯಲ್ಲಿ ಅಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ಸಾಧ್ಯತಗಳ ಬಗ್ಗೆ ಅರಿತು ಕೊಂಡರೆ ಕೃಷಿಗೆ ದೊಡ್ಡ ಮಾರುಕಟ್ಟೆಯನ್ನು ಕಂಡು ಕೊಳ್ಳು ಸಾಧ್ಯವಿದೆ.
ವಿಶ್ವ ಕೃಷಿ ಮಾರುಕಟ್ಟೆಯನ್ನು ಗಮನಿಸಿದಾಗ ಭಾರತ ಬಹು ದೊಡ್ಡ ಪಾಲನ್ನು ಹೊಂದಿದೆ. ಭಾರತದಲ್ಲಿ ಶೇ 50ರಷ್ಟು ಜನರ ಜೀವನದ ದಾರಿ ಇದೇ ಅಗಿದೆ. ಭಾರಿತದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಗೋದಿ , ಭತ್ತ ಹಾಗೂ ಹತ್ತಿಯನ್ನು ಬೆಳೆಯಲಾಗುತ್ತಿದೆ. ಅದೇ ರೀತಿಯಲ್ಲಿ ಹಾಲು , ಸಾಂಬಾರು ಪದಾರ್ಥಗಳ ಉತ್ಪಾದನೆಯೂ ನಮ್ಮಲ್ಲಿ ಗರಿಷ್ಟ ಮಟ್ಟದಲ್ಲಿದೆ. ಹಣ್ಣು -ಸಂಪಲು , ತರಕಾರಿ , ಚಹಾ , ಕಬ್ಬು , ಮೀನುಗಾರಿಕೆ ಕ್ಷೇತ್ರದಲ್ಲಿ ನಾವು ವಿಶ್ವಕ್ಕೆ 2ನೇ ಸ್ಥಾನದಲ್ಲಿದ್ದೇವೆ.
ಆಹಾರ ಸಂಸ್ಕರಣೆಯಂತಹ ಮೌಲ್ಯವರ್ಧಿತ ಉಪಕ್ರಮಗಳಿಂದ ಭಾರತ ವಿಶ್ವದ ಆಹಾರ ಉತ್ಪನ್ನ ವ್ಯವಹಾರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಭಾರತದ ಒಟ್ಟು ಆಹಾರ ಮಾರುಕಟ್ಟೆಯಲ್ಲಿ ಶೇ 32 ರಷ್ಟು ಪಾಲನ್ನು ಆಹಾರ ಸಂಸ್ಕರಣಾ ಕಾರ್ಖಾನೆಗಳಾದ್ದಾಗಿದೆ. ಉತ್ಪಾದನೆ , ಬಳಕೆ , ರಪ್ತು ಹಾಗೂ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟು ಕೊಂಡರೆ ದೇಶದ ಅರ್ಥಿಕಾಭಿವೃದ್ದಿಯಲ್ಲಿ ಅತೀ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.
ಒಂದು ಸಮೀಕ್ಷೆಯ ಪ್ರಕಾರ ಭಾರತದ ಕೃಷಿ ವಲಯ 2025ರ ಹೊತ್ತಿಗೆ 2400 ಕೋಟಿ ರೂ.ಗಳಿಗೇರಲಿದೆ. ಸದ್ಯದ ಲೆಕ್ಕಾಚಾರಗಳ ಪ್ರಕಾರ ಭಾರತದ ಜಿಡಿಪಿಯ ಶೇ.18ರಷ್ಟನ್ನು ಕೃಷಿ ವಲಯ ಕೊಡುಗೆಯಾಗಿ ನೀಡುತ್ತಿದೆ. ದೇಶದಲ್ಲಿ ಕೃಷಿ ಉತ್ಪನ್ನಗಳ ಒಟ್ಟು ಉತ್ಪಾದನೆ 153.43 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವೂ ಆಹಾರ ಉತ್ಪನ್ನಗಳ ಬೇಡಿಕೆ ವೃದ್ದಿಸಲು ಕಾರಣವಾಗಿದೆ. ಜೊತೆಯಲ್ಲಿ ಸಾಕಷ್ಟು ಆಹಾರ ಉತ್ಪನ್ನಗಳು ರಫ್ತು ಮಾರುಕಟ್ಟೆಯನ್ನು ಹೊಂದಿದ್ದು , ಇದು ಈ ವಲಯಕ್ಕೆ ದೊಡ್ಡ ಬೂಸ್ಟ್ ನೀಡಿದಂತಾಗಿದೆ.
ಸರಕಾರಗಳು ಆಹಾರ ಸಂಸ್ಕರಣಾ ಘಟಕ , ಕೋಲ್ಡ್ ಸ್ಟೊರೇಜ್ , ದಾಸ್ತಾನು ಮಳಿಗೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಕಾರಣ ಕೃಷಿ ವಲಯ ಬೆಳೆಯಲು ನೆರವಾಗುತ್ತಿದೆ. ಇದೇ ಹೊತ್ತಿಗೆ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ.
ಕೊರೋನಾ ಮಹಾಮಾರಿಯ ಬಳಿಕ ಯುವಕರು ಮತ್ತೆ ಕೃಷಿ ವಲಯದಲ್ಲಿ ಅಸಕ್ತಿ ತೋರಿಸುತ್ತಿರುವ ಕಾರಣ , ಪಾಳು ಬಿದ್ದ ಹೊಲಗಳು ಮತ್ತೆ ಹಸಿರುಗೊಳ್ಳುತ್ತಿವೆ. ಉನ್ನತ ಶಿಕ್ಷಣ ಪಡೆದ ಯುವಜನತೆ ಕೃಷಿಯಲ್ಲಿನ ಹೊಸ ಸಾಧ್ಯತೆಗಳನುನ ಕಂಡು ಕೊಳ್ಳುತ್ತಿದೆ. ಆಹಾರ ಉತ್ಪನ್ನಗಳ ಮೌಲ್ಯವರ್ಧನೆಯತ್ತ ಹೆಚ್ಚು ಪೋಕಸ್ ಆಗಿರುವ ಈ ವರ್ಗ ಅದಕ್ಕಿರುವ ದೊಡ್ಡ ಮಾರುಕಟ್ಟೆಯನ್ನು ಅನ್ವೇಷಿಸುತ್ತಿದೆ. ಜೊತೆಯಲ್ಲಿ ಯಶಸ್ಸು ಪಡೆದಿದೆ ಕೂಡಾ.
ರಾಸಾಯನಿಕ ಮುಕ್ತ ಆಹಾರ ಉತ್ಪನ್ನಗಳು ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ಬೆಳೆಗಾರ ಉತ್ಪಾದನೆಯ ಪ್ರಮಾಣಗಿಂತ ಗುಣಮಟ್ಟ ಹಾಗೂ ಉಪಯುಕ್ತತೆ ಬಗ್ಗೆ ಅಧಿಕ ಗಮನ ನೀಡುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಇದು ಕೂಡಾ ದೊಡ್ಡ ರೀತಿಯ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ.
ನಮ್ಮ ಹಿರಿಯರು ನಂಬಿದ್ದ ಹಳೆ ಕೃಷಿ ಪದ್ದತಿಗಳೊಂದಿಗೆ ಅಧುನಿಕ ಪದ್ದತಿಗಳನ್ನು ಬ್ಲೆಂಡ್ ಮಾಡಿದಾಗ ಕೆಲಸಗಳು ಸುಲಭವಾಗುವುದಲ್ಲದೆ , ಫಸಲು ಕೂಡಾ ಗುಣಮಟ್ಟದ್ದಾಗಿರುತ್ತದೆ. ಈ ಗುಣಮಟ್ಟವೇ ಸದಾ ರೈತನನ್ನು ರಕ್ಷಿಸುತ್ತದೆ. ಹಾಗಾಗಿ ನಷ್ಟದ ಮಾತು ನೆಪ ಅಷ್ಟೇ.
ದೇಶದಲ್ಲಿ ಮತ್ತೆ ಕೃಷಿಗೆ ಹೆಚ್ಚಿನ ಒತ್ತು ಸಿಗುವ ಹೊತ್ತಿನಲ್ಲಿ ಇದಕ್ಕೆ ಪೂರಕವಾಗಿರುವ ಕಂಪೆನಿಗಳು ಅಧಿಕ ವಹಿವಾಟು ಮಾಡಿಕೊಳ್ಳುವುದಂತೂ ನಿಜ. ಯಂತ್ರೋಪಕರಣ ತಯಾರಿಕಾ ಸಂಸ್ಥೆಗಳು , ಮುಖ್ಯವಾಗಿ ಬೀಜ ಸಂರಕ್ಷಣಾ ಕಂಪೆನಿಗಳು , ಹನಿ ನೀರಾವರಿ ಪರಿಕರ ಉತ್ಪಾದನಾ ಘಟಕಗಳು ದೊಡ್ಡ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲಿವೆ. ಹಾಗಾಗಿ ಇವುಗಳಲ್ಲಿ ಹೂಡಿಕೆ ಸುರಕ್ಷಿತ ಹಾಗೂ ಲಾಭಾದಾಯಕವಾಗಬಲ್ಲದು.

× Subscribe us