News @ your fingertips
News @ your fingertips
ಕೋ ಕೋ ಬೆಲೆ ಸದ್ಯ ನಾಗಲೋಟದಲ್ಲಿದೆ.
ಇನ್ನೂ ದರ ಏರಿಕೆಯಾಗಲಿದೆಯೇ ಎನ್ನುವುದು ಸದ್ಯದ ಪ್ರಶ್ನೆ.
ಹಸಿ ಕೋಕೋ ೬೦ ರೂ. ಹೆಚ್ಚಿ ೨೩೦ ರೂ.ಗಳಾದರೆ , ಒಣ ಕೋ ಕೋ ೧೦೦ ರೂ. ಜಂಪ್ ಹೊಡೆದು ೬೫೦ ರೂ.ಗಳಿಗೇರಿದೆ.
ಈ ಓಟ ಮುಂದುವರಿಯಬಹುದೇ ಅಥವಾ ಇದು ತಾತ್ಕಾಲಿಕ ಏರಿಕೆಯೇ ?
ವಿಶ್ವ ಮಾರುಕಟ್ಟೆಯಲ್ಲಿನ ಬದಲಾವಣೆಗಳೇ ಇಂದಿನ ದರ ಏರಿಕೆಗೆ ಮುಖ್ಯ ಕಾರಣ.ಬ್ರೆಜಿಲ್ ಜಾಗತಿಕವಾಗಿ ಅತೀ ಹೆಚ್ಚು ಕಾಫಿ ಹಾಗೂ ಕೋ ಕೋ ಬೆಳೆಯುವ ರಾಷ್ಟ್ರ. ವೆಸ್ಟ್ ಇಂಡೀಸ್‌ನಲ್ಲೂ ಅಧಿಕ ಪ್ರಮಾಣದಲ್ಲಿ ಈ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಎರಡು ರಾಷ್ಟ್ರಗಳಲ್ಲಿ ಇತ್ತೀಚಿಗೆ ಕಂಡ ಬಂದಿರುವ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ತೀರಾ ಕುಸಿದಿದೆ. ಇದು ಜಾಗತಿಕ ಮಟ್ಟದಲ್ಲೂ ಬೆಲೆ ಮೇಲೆ ತೀರಾ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾಫಿ ಹಾಗೂ ಕೋಕೋ ಈ ಎರಡು ರಾಷ್ಟ್ರಗಳಿಂದ ರಫ್ತಾಗುತ್ತದೆ.
ಕೋ ಕೋ ಉತ್ಪಾದನೆ ಕೊರೆತೆಯಿಂದಾಗಿ ಇನ್ನೂ ಕೆಲ ದಿನಗಳ ಕಾಲ ದರ ಏರಿಕೆಯಲ್ಲಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಹಾಗಾಗಿ ಕೋಕೋ ಬೆಳಗಾರರು ಅತಂಕ ಬಿಟ್ಟು ಇನ್ನೂ ಕೆಲ ದಿನಗಳ ಕಾಲ ನಿಟ್ಟುಸಿರು ಬಿಡಬಹುದು.
More Stories
ಸಾವಯವ ಕೃಷಿ ಯಾಕೆ ಕಷ್ಟ ?
ಮನಸ್ಸು ಮಾಡಿ , ಕೃಷಿ ಎಲ್ಲಕ್ಕಿಂತ ಲಾಭದಾಯಕ