ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಹಾಗೂ ಅತೀ ಪ್ರಭಾವಿ ಕ್ಷೇತ್ರವೆಂದರೆ ಆರೋಗ್ಯ .
ಭಾರತದಲ್ಲೂ ಅದಾಯ ಹಾಗೂ ಉದ್ಯೋಗ ದೃಷ್ಟಿಯಿಂದ ಇದು ಅತ್ಯಂತ ದೊಡ್ಡ ಕ್ಷೇತ್ರವಾಗಿ ಪರಿಗಣಿತವಾಗಿದೆ.
ಆರೋಗ್ಯ ವಲಯ ಎನ್ನುವುದು ಆಸ್ಪತ್ರೆಗಳು , ಚಿಕಿತ್ಸಾ ಯಂತ್ರೋಪಕರಣಗಳು , ಕ್ಲಿನಿಕಲ್ ಪ್ರಯೋಗಗಳು , ಟೆಲಿ ಮೆಡಿಸಿನ್ , ಮೆಡಿಕಲ್ ಟೂರಿಸಂ , ಆರೋಗ್ಯ ವಿಮೆ , ಚಿಕಿತ್ಸಾ ಪರಿಕರಗಳು … ಹೀಗೆ ಹಲವು ವಿಭಾಗಗಳನ್ನು ಒಳಗೊಂಡಿದೆ. ಈ ಪ್ರತಿಯೊಂದು ಭಾಗಗಳು ಅತಿ ವೇಗವಾಗಿ ಪ್ರಗತಿಯನ್ನು ಹೊಂದುತ್ತಿರುವ ಹಾಗೂ ಅತ್ಯಾಧುನಿಕ ರೀತಿಯಲ್ಲಿ ಬೆಳವಣಿಗೆಯನ್ನು ಕಾಣವಂತಹದ್ದು ಆಗಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತಿರುವ ಕಾರಣ ಎಲ್ಲಾ ಭಾಗಗಳಲ್ಲಿ ಸೇವೆ ಲಭ್ಯವಾಗುತ್ತಿವೆ. ಇದು ಈ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮಾತ್ರವಲ್ಲದೆ , ವೇಗವಾಗಿ ಮನ್ನಡೆಯಲು ಕಾರಣವಾಗುತ್ತಿದೆ. ಮುಖ್ಯವಾಗಿ ಸರಕಾರಿ ಸೇವೆಗಳು ದೇಶದ ಕೆಲವು ಮುಖ್ಯ ನಗರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮಾಂತರ ಪ್ರದೇಶಗಳನ್ನು ಅವರಿಸಿಕೊಂಡಿದೆ. ಆದರೆ ಖಾಸಗಿ ವೈದ್ಯಕೀಯ ಸೇವೆ ದೇಶದ ಪ್ರಮುಖ ನಗರಗಳ ಜೊತೆಯಲ್ಲಿ ಮೊದಲ ಹಾಗೂ ದ್ವಿತೀಯ ಹಂತ ಪಟ್ಟಣಗಳಲ್ಲೂ ಹರಡಿಕೊಂಡಿದೆ. ಜೊತೆಗೆ ಅತ್ಯಾಧುನಿಕ ಚಿಕಿತ್ಸಾ ಸವಲತ್ತುಗಳನ್ನು ಖಾಸಗಿ ರಂಗ ಒದಗಿಸುತ್ತಿರುವ ಕಾರಣ ಅದು ಯಶಸ್ಸಿನತ್ತ ಮುಖ ಮಾಡಿದೆ.
ಭಾರತದಲ್ಲಿ ಆರೋಗ್ಯ ರಂಗ ಯಶಸ್ಸಿ ಪಡೆಯಲು ಪೂರಕವಾದ ಅಂಶವೆಂದರೆ ಇಲ್ಲಿ ಉತ್ತಮವಾಗಿ ತರಬೇತಿ ಹೊಂದಿರುವ ವೈದ್ಯಕೀಯ ಪರಿಣತರು. ಜೊತೆಯಲ್ಲಿ ನೆರೆಯ ಏಷ್ಯಾ ಹಾಗೂ ಪಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆರೋಗ್ಯ ಕ್ಷೇತ್ರ ದುಬಾರಿಯಾಗಿರುವುದು. ಇದೇ ಕಾರಣದಿಂದ ಭಾರತದಲ್ಲಿ ಮೆಡಿಕಲ್ ಟೂರಿಸಂ ಹೆಚ್ಚುವ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಕಡಿಮೆ ಖರ್ಚಿನಿಂದಾಗಿ ವಿಶ್ವದಾದ್ಯಂತದಿಂದ ಜನರು ಚಿಕಿತ್ಸೆ ಪಡೆಯಲು ಭಾರತವನ್ನು ನೆಚ್ಚಿಕೊಳ್ಳುವಂತಾಗಿದೆ. ವೆಚ್ಚ ಕಡಿಮೆಯಾಗಿರುವ ಕಾರಣಕ್ಕೆ ವಿಶ್ವ ಪ್ರಮುಖ ಔಷಧಿ ಸಂಸ್ಧೆಗಳು , ವೈದ್ಯಕೀಯ ಸಂಸ್ಥೆಗಳು ತಮ್ಮ ಸಂಶೋಧನೆ ಹಾಗೂ ಅಭಿವೃದ್ದಿ ಕಾರ್ಯವನ್ನು ಭಾರತದಲ್ಲಿ ನಿರ್ವಹಿಸಲು ಮುಂದೆ ಬರುತ್ತಿವೆ.
2016 -22ರ ನಡುವೆ ಭಾರತದ ಆರೋಗ್ಯ ಕ್ಷೇತ್ರ ಮೂರು ಪಟ್ಟು ಬೆಳವಣಿಗೆಯನ್ನು ಕಂಡಿದೆ. 2016ರಲ್ಲಿ 110 ಬಿಲಿಯನ್ ಡಾಲರ್ ಇದ್ದ ವಹಿವಾಟು 2022ರ ಹೊತ್ತಿಗೆ 372 ಬಿಲಿಯನ್ ಡಾಲರ್‌ಗೆ ಹೆಚ್ಚಿದೆ. 2017-23ಸಾಲಿನಲ್ಲಿ ಒಟ್ಟು 27 ಲಕ್ಷ ಉದ್ಯೋಗದ ಸೃಷ್ಟಿಯನ್ನು ನಿರೀಕ್ಷಿಸಲಾಗಿತ್ತು . ಅಂದರೆ ಪ್ರತಿ ವರ್ಷ ಸರಾಸರಿ 5 ಲಕ್ಷ ಉದ್ಯೋಗಾವಕಾಶಗಳು. ಇದೇ ಏರು ಗತಿಯನ್ನು ಕ್ಷೇತ್ರ ಕಾಯ್ದುಕೊಂಡು ಬಂದಿದೆ.
ಅಂಕಿ- ಅಂಶಗಳ ಪ್ರಕಾರ 2022ರಲ್ಲಿ ಭಾರತದಲ್ಲಿನ ಆರೋಗ್ಯ ವಿಮೆಗಳ ಪಡೆದಿದ್ದ ಪ್ರಿಮಿಯಂ 73 ಸಾವಿರ ಕೋಟಿಗಳಿಗಿಂತಲೂ ಅಧಿಕ.
ಭಾರತವೂ 2020ರಲ್ಲಿ 2.89 ಬಿಲಿಯನ್ ಡಾಲರ್ ಮೆಡಿಕಲ್ ಟೂರಿಸಂ ಮಾರುಕಟ್ಟೆಯನ್ನು ಹೊಂದಿದ್ದು , ಅದು 2026ರ ಹೊತ್ತಿಗೆ 13.50 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆ ಇದೆ. 2020ರ ಭಾರತೀಯ ಪ್ರವಾಸಿ ಅಂಕಿ ಅಂಶ ವರದಿಯ ಪ್ರಕಾರ 2019ರಲ್ಲಿ ಸರಿ ಸಮಾರು 7 ಲಕ್ಷ ಪ್ರವಾಸಿಗರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. 2020-21ರ ಮೆಡಿಕಲ್ ಟೂರಿಸಂ ಇಂಡೆಕ್ಸ್‌ನಲ್ಲಿರುವ ಒಟ್ಟು 46 ತಾಣಗಳಲ್ಲಿ ಭಾರತ 10ನೇ ರ‌್ಯಾಂಕಿಂಗ್ ಪಡೆದಿದೆ. ಇದರ ಪ್ರಕಾರ ವಿಶ್ವದಾದ್ಯಂತದ ರೋಗಿಗಳು ಅಧುನಿಕ ಚಿಕಿತ್ಸೆಗಾಗಿ ಭಾರತವನ್ನು ಪರಿಗಣಿಸುತ್ತಿದ್ದಾರೆ.
ಕೇಂದ್ರ ಆರೋಗ್ಯ ಹಾಗೂ ಆರೈಕೆ ಸಚಿವ ಡಾ ಭಾರತಿ ಪ್ರವೀಣ್ ಪವರ್ ಅವರು ಲೋಕಸಭೆಗೆ ನೀಡಿದ ಮಾಹಿತಿಯಂತೆ ಭಾರತದಲ್ಲಿ 854 ಜನರಿಗೊಬ್ಬ ವೈದ್ಯರು ಲಭ್ಯರಿದ್ದಾರೆ. ಅಂದರೆ 12.68 ಲಕ್ಷ ಅಲೋಪತಿ ಹಾಗೂ 5.65 ಲಕ್ಷ ಆಯುಷ್ ವೈದ್ಯರು ನೊಂದಾಯಿಸಿಕೊಂಡಿದ್ದಾರೆ.
ಭಾರತದಲ್ಲಿ ಔಷಧಿ ಹಾಗೂ ಇನ್ನಿತರ ಪೂರಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ವಿದೇಶಿ ಹೂಡಿಕೆಯಾಗುತ್ತಿದೆ. ಸರಕಾರದ ವರದಿ ಪ್ರಕಾರ 2000- 2022ರ ಅವಧಿಯಲ್ಲಿ 19. 90 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಹರಿದು ಬಂದಿದೆ.
ಇಷ್ಟೇ ಅಲ್ಲದೆ , ಕೇಂದ್ರ ಸರಕಾರವೂ ಹಲವಾರು ಯೋಜನೆಗಳ ಮೂಲಕ ಆರೋಗ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುತ್ತಿದೆ. 2023-24ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ 89155 ಕೋ. ರೂಗಳನ್ನು ಮೀಸಲಿಡಲಾಗಿದೆ.
ಒಟ್ಟಾರೆಯಾಗಿ ದೇಶ ಅಭಿವೃದ್ದಿಯಲ್ಲೂ ಆರೋಗ್ಯ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಜೊತೆಯಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ವಲಯವೂ ಹೌದು. ಹಾಗಾಗಿ ಹೂಡಿಕೆ ದೃಷ್ಟಿಯಿಂದಲೂ ನಾವು ಗಮನ ಇಡಬೇಕಿರುವ ಕ್ಷೇತ್ರವೂ ಕೂಡಾ.
ಮುಖ್ಯವಾಗಿ ಜೌಷಧಿ ತಯಾರಿಕೆ ಕಂಪೆನಿಗಳು ಕಳೆದ ಹಲವು ವರ್ಷಗಳಿಂದ ಅತ್ಯಂತ ಸಾಧನೆಗಳನ್ನು ತೋರಿದ್ದು , ಗಣಿನೀಯ ಪ್ರಮಾಣದ ವಾರ್ಷಿಕ ವಹಿವಾಟುಗಳನ್ನು ನಡೆಸಿವೆ. ಇಂತಹ ಕಂಪೆನಿಗಳಲ್ಲಿನ ಹೂಡಿಕೆ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕವಾಗಲಿದೆ.
News @ your fingertips
More Stories