7 rupees

News @ your fingertips

100 ಕೋಟಿ ಕ್ಲಬ್‌ಗೆ ಸು ಫ್ರಮ್ ಸೋ

ಕನ್ನಡ ಚಿತ್ರರಂಗದಲ್ಲಿ ಸದ್ಯ ಮನೆಮಾತಾಗಿರುವ ಚಿತ್ರ ಸು ಫ್ರಮ್ ಸೋ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ.
ಈಗಾಗಲೇ 80 ಕೋಟಿ ರೂ.ಗಳನ್ನು ಬಾಚಿರುವ ಚಿತ್ರ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರುವುದು ಗ್ಯಾರಂಟಿ.
ಅತಿ ಸರಳವಾದ ,ಕಥೆಯಲ್ಲದ ಕಥೆ ಹಂದರವನ್ನು ಹೊಂದಿರುವ ಚಿತ್ರ ಕೇವಲ ಹಾಸ್ಯದಿಂದ ಮಧ್ಯಮ ವರ್ಗದ ಪ್ರೇಕ್ಷಕರ ವರ್ಗವನ್ನು ಗೆದ್ದಿದೆ. ನಮ್ಮ ನಡುವೆ ನಡೆಯುವ ಸಾಮಾನ್ಯ ಘಟನೆಗಳನ್ನು ಅಂದವಾಗಿ ಪೋಣಿಸಿ , ಕಲಾತ್ಮಕ ಚಿತ್ರವಾಗಿ ಪ್ರೇಕ್ಷಕರ ಮುಂದಿಟ್ಟಿರುವುದು ರಾಜ್ ಬಿ.ಶೆಟ್ಟಿ ತಂಡದ ಹೆಗ್ಗಳಿಕೆ.
ಸಾಮಾನ್ಯ ಕಲಾವಿದರನ್ನು ಒಳಗೊಂಡ ಟೀಮ್ ಬಹಳ ದಿನಗಳ ನಂತರ ಒಂದು ಬ್ಲಾಕ್‌ಬಸ್ಟರ್ ಸಿನಿಮಾ ಕೊಡುವಲ್ಲಿ ಯಶಸ್ಸು ಕಂಡಿದೆ.
ಸಿನಿಮಾ ಹೀರೋ – ಹೀರೋಯಿನ್‌ಗಳ ಮೇಲೆ ಅವಲಂಬಿತವಾಗಿಲ್ಲ. ಸರಳ, ಸುಂದರ ಕಥಾನಕಗಳು ಕೂಡಾ ಯಶಸ್ಸು ಕಾಣಲು ಸಾಧ್ಯ ಎನ್ನುವುದಕ್ಕೆ ಸು ಫ್ರಮ್ ಸೋ ಚಿತ್ರವೇ ಉದಾಹರಣೆ.
ಕರಾವಳಿ ಭಾಗದ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರ ತಂಡ ಹಾಕಿದ ಬಂಡವಾಳ 4.5 ಕೋ. ರೂ. ಸದ್ಯ ಯಾವುದೇ ಊಹೆಗಳಿಗೂ ನಿಲುಕದಂತೆ ನಾಗಾಲೋಟದ ಓಟ ಮುಂದುವರಿಸಿದೆ. ಈಗಾಗಲೇ ಮಲಯಾಳಂನಲ್ಲಿ ಡಬ್‌ಗೊಂಡು ಯಶಸ್ಸು ಕಂಡಿರುವ ಚಿತ್ರ ತಮಿಳು , ತೆಲುಗು ಡಬ್ಬಿಂಗ್ ಮುಗಿಸಿದೆ. ಹಿಂದಿ ಭಾಷೆಯಲ್ಲಿ ರಿಮೇಕ್‌ಗೊಳ್ಳಲಿದೆ ಎನ್ನುವ ಸುದ್ದಿಗಳು ಹರಡಿವೆ. ಈ ನಡುವೆ ಬಾಲಿವುಡ್ ನಟ ಅಜಯ್ ದೇವಗನ್ ಚಿತ್ರ ನೋಡಿ ಶಬ್ಬಾಸ್‌ಗಿರಿ ನೀಡಿದ್ದಾರೆ. ಚಿತ್ರ ಪ್ಯಾನ್ ಇಂಡಿಯಾ ತಲುಪಿಸಲು ಅವರೇ ಹಕ್ಕುಗಳನ್ನು ಪಡೆದುಕೊಂಡರೂ ಆಶ್ಚರ್ಯವಲ್ಲ.