ಘಟ್ಟದ ಕೆಳಗೊಂದು ಖುಷಿಕೊಡುವ ‘ಕೂಲ್’ ತಾಣ
ಅವರ ಹೆಸರು ಶಿವ.
ನೋಡಿದರೆ , ಏ ! ಇವರ ಅಂತ ಹುಬ್ಬೇರಿಸಬೇಕು. ಅಷ್ಟು ಸಿಂಪಲ್. ಸಾದಾಸೀದಾ .
ಹಳೆ ಪಂಚೆ , ಅದರ ಮೇಲೊಂದು ಸಾಧಾರಣ ಕಾಟನ್ ಶರ್ಟು , ಹೆಗಲ ಮೇಲೊಂದು ಹಳೆ ಶಾಲು. ಬೇವರು ಒರಿಸಿಕೊಳ್ಳಲು.
ಇದರಲ್ಲಿ ಎಂತಹ ವಿಶೇಷ ಅಂತ ನಿಮಗೆ ಅನಿಸಿರಬಹುದು.
ವಿಶೇಷ ಇದ್ದೇ , ನಾನು ಈ ವ್ಯಾಖ್ಯಾನ ಮಾಡಿರುವುದು.
ಶಿವ , ಶಿವು ಹೇಗೆ ಬೇಕಾದರೂ ಕರೆಯಬಹುದು. ಮೂಲತ: ಬೆಂಗಳೂರಿನವರು. ಕಲಿತದ್ದು ಭೂಗರ್ಭ ವಿಜ್ಞಾನ. ಹಲವು ವರ್ಷ ಕೆಲಸ ಮಾಡಿದ್ದು ಕೂಡಾ ಅದೇ ವಿಷಯದಲ್ಲಿ. ಮುಖ್ಯವಾಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ವಜ್ರ ಶೋಧಕರಾಗಿ ಹಲವು ವರ್ಷ ಕಾರ್ಯನಿರ್ವಹಣೆ. ಬರುಬರುತ್ತಾ ಹೊಸತೇನಾದರೂ ಮಾಡಲು ಮನಸ್ಸು ಹಾತೊರೆಯಿತು. ಆಗ ಯೋಚನೆಗೆ ಬಂದದ್ದು ಕೃಷಿ.
ಕರಾವಳಿಯ ಗೆಳೆಯ ಜೊತೆ ಸೇರಿ ಉಡುಪಿ ಹಲವು ಭಾಗಗಳಲ್ಲಿ ಭೂಮಿಗಾಗಿ ಹುಡುಕಾಟ. ಆಗ ಸಿಕ್ಕಿದ್ದು ಕಾರ್ಕಳದ ನಾರಾವಿ ಬಳಿಯ ಜಮೀನು. ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಸುಮಾರು 3 ಎಕರೆ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಆರಂಭ.
ಶಿವು ಹೇಳುವ ಪ್ರಕಾರ, ಭೂಮಿ ಖರೀದಿಸಿದಾಗ ಅವರಿಗೆ ಕೃಷಿ ಅಂದ್ರೆ ಏನು ಅಂತ ತಿಳಿದಿರಲಿಲ್ಲವಂತೆ. ಏನೋ ಕೃಷಿ ಮಾಡಬೇಕು ಅನ್ನೋ ಹುಚ್ಚಿನಿಂದ ಕೈ ಹಾಕಿದ್ದು. 2018ರಲ್ಲಿ ಖರೀದಿಸಿದ ಈ ಜಮೀನು ಬರೇ 5 ವರ್ಷಗಳಲ್ಲಿ ಇಂದು ಹಸಿರಿನಿಂದ ನಳನಳಿಸುತ್ತಿದೆ. ಹಳೆದಾಗ ಮನೆ ಹೊಸ ರೂಪ ಪಡೆದು ಪ್ರವಾಸಿಗರ ಆಕರ್ಷಣಗೊಳಗಾಗಿದೆ.
ಅದೇ ‘ಮಗಧವನ’. ಪಕ್ಕಾ ಸ್ಪೈಸ್ ಗಾರ್ಡನ್.
ಕೃಷಿ ಎಲ್ಲರೂ ಮಾಡುತ್ತಾರೆ. ಅದ್ರೆ ಶಿವುಗೆ ಅನ್ನಿಸಿದ್ದು ಹೊಸದೇನಾದರೂ ಕೊಡಬೇಕು ಅಂತ. ಅದಕ್ಕೆ ಅವರು ಅಯ್ದು ಕೊಂಡ ಪ್ರಕಾರ , ಸಂಬಾರು ಪದಾರ್ಥ. ಅಡುಗೆ ಬೇಕಾಗುವ ಸಂಬಾರುಗಳನ್ನು ಒಂದೆಡೆ ಸಿಗುವಂತಾದರೆ ಹೇಗೆ ಎನ್ನುವ ಲೆಕ್ಕಾಚಾರ ಮಾಡಿದ್ದೆ ತಡ. ಶುರು ಮಾಡಿಕೊಂಡರು ಅದರು ಕುರಿತ ಅಧ್ಯಯನ ಹಾಗೂ ಪ್ರಯಣವನ್ನು.
ಇಂದು ಅವರ ತೋಟದಲ್ಲಿ ಅರೇಳು ಬಗೆಯ ಶುಂಠಿಗಳಿವೆ. ಐದಾರು ಬಗೆಯ ಹಳದಿ ಇದೆ. ನಾಲ್ಕೈದು ಬಗೆಯ ತುಳಸಿ ಗಿಡಗಳಿವೆ. ಹಲವು ಬಗೆಯ ಲಿಂಬೆಗಳಿವೆ. ಲವಂಗ , ಜಾಯಿ ಕಾಯಿ , ಕಾಫಿ ಗಿಡ , ಏಲಕ್ಕಿ , ಲವಂಗ , ಕರಿಮೆಣಸು , ಕೋಕೋ ….. ಹೀಗೆ ಎಲ್ಲ ಬಗೆಯ ಗಿಡಗಳನ್ನು ನೀವಿಲ್ಲಿ ಕಾಣಬಹುದು.
ಇಷ್ಟು ಅದರೆ ಪರವಾಗಿಲ್ಲ. ಈ ಸಾಂಬಾರು ಪದಾರ್ಥಗಳನ್ನು ಬಳಸಿ , ಹಲವು ಬಗೆಗೆ ಹೊಸ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅವುಗಳು ಕೂಡಾ ವಿಭಿನ್ನ ಹಾಗೂ ವಿಶಿಷ್ಟ.
ಈ ಮಗಧವನ ವಾರಾಂತ್ಯ ವಾಸಕ್ಕಂತೂ ಹೇಳಿ ಮಾಡಿಸಿದ ಜಾಗ. ಪಶ್ಚಿಮ ಘಟ್ಟದ ಸುಂದರ ಪ್ರಕೃತಿ ವೈಭವವನ್ನು ಅನಂದಿಸುತ್ತಾ ಕಾಲ ಕಳೆಯಬಹುದು. ಪ್ರಕೃತಿ ಜೊತೆಯಲ್ಲಿ ಮಾತುಕತೆ ಮಾಡಬಹುದು. ಜೊತೆಯಲ್ಲಿ ಅಲ್ಲೊಂದು ಸಣ್ಣ ನದಿಯೂ ಇದೆ. ನಿಶ್ಯಬ್ದ ಕಾನನದಲ್ಲಿ ಜುಳು ಜುಳು ಹರಿಯುವ ನದಿಗೆ ನೀವು ಕಿವಿಯಾಗಬಹುದು. ಬೆಳಗಿನ ಜಾವವಾದರೆ ಹಕ್ಕಿಗಳ ಕಲರವಕ್ಕೆ ಧ್ವನಿಯಾಗಬಹುದು.
ಜೊತೆಯಲ್ಲಿ ಅತ್ಯಂತ ಸ್ವಾದಿಷ್ಟ ದೇಶಿ , ಪಕ್ಕ ಸಾವಯವ ಭೋಜನಕ್ಕೂ ಸಾಕ್ಷ್ಷಿಯಾಗಬಹುದು. ಅಲ್ಲೆ ಬೆಳೆದಿರುವ ತರಕಾರಿಗಳು ನಿಮ್ಮ ಊಟಕ್ಕೂ ಲಭ್ಯ.
ಯಾವುದಕ್ಕೂ ಅಲ್ಲಿಗೆ ಹೋಗುವ ಮುನ್ನ ಕರೆ ಮಾಡಿ :
More Stories
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಯಾನ ದುಬಾರಿ
ಬೇಡಿಕೆ ಪಡೆದ ಹೊಟೇಲ್ ಉದ್ಯಮ ಈ ಷೇರುಗಳ ಬಗ್ಗೆ ಗಮನ ಇರಲಿ
ಗುಡ್ ನ್ಯೂಸ್ !ಭಾರತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು