7 rupees

News @ your fingertips

ಐಸಿಐಸಿಐ ಬ್ಯಾಂಕ್ ಎಂಡಿ ರಾಜೀನಾಮೆ ಸುಳ್ಳು ವರದಿ : ಸ್ಪಷ್ಟನೆ

ಖಾಸಗಿ ವಲಯದ ಅಗ್ರಗಣ್ಯ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ಎಂಡಿ ಹಾಗೂ ಸಿಇಒ ಸಂದೀಪ್ ಭಕ್ಷಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿಯನ್ನು ಬ್ಯಾಂಕ್ ನಿರಾಕರಿಸಿದೆ.
ಭಕ್ಷಿ ಅವರು ವೈಯಕ್ತಿಕ ಕಾರಣಗಳಿಗಾಗಿ ಬ್ಯಾಂಕಿನಿಂದ ನಿರ್ಗಮಿಸಲಿದ್ದಾರೆ ಎಂದು ಸುದ್ದಿ ತಾಣವೊಂದು ವರದಿ ಮಾಡಿತ್ತು.
ಈ ವರದಿಯ ಬಗ್ಗೆ ವಿವರಣೆ ನೀಡಿರುವ ಬ್ಯಾಂಕ್ , ಸಂದೀಪ್ ಭಕ್ಷಿ ಅವರು ಯಾವುದೇ ಕಾರಣಕ್ಕೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಇರಾದೆ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಜೊತೆಯಲ್ಲಿ ಇದೆಲ್ಲವೂ ನಿರಾಧಾರ ಸುದ್ದಿಗಳು ಎಂದು ತಿಳಿಸಿದೆ.
ಭಕ್ಷಿ ಅವರು 2018ರಲ್ಲಿ ಬ್ಯಾಂಕಿನ ಎಂಡಿ ಹಾಗೂ ಸಿಇಒ ಹುದ್ದೆಯನ್ನು ಸ್ವೀಕರಿಸಿದ್ದರು. 2022ರಲ್ಲಿ ಮತ್ತೆ ಅವರನ್ನು ಮುಂದಿನ ಐದು ವರ್ಷಗಳಿಗಾಗಿ ಮರು ನೇಮಕ ಮಾಡಲಾಗಿತ್ತು.
2018ರಲ್ಲಿ ಬ್ಯಾಂಕಿನ ಅಂದಿನ ಎಂಡಿ ಹಾಗೂ ಸಿಇಒ ಆಗಿದ್ದ ಚಂದಾ ಕೋಚ್ಚಾರ್ ಅಧಿಕಾರ ದುರುಪಯೋಗ ಹಾಗೂ ಅವ್ಯವಹಾರ ಸಂಬಂಧ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆ ವೇಳೆಯಲ್ಲಿ ಭಕ್ಷಿ ಬ್ಯಾಂಕಿನ ಪೂರ್ಣಾವಧಿ ನಿರ್ದೇಶಕ ಹಾಗೂ ಸಿಒಒ ಜವಾಬ್ದಾರಿಯಲ್ಲಿದ್ದರು.

× Subscribe us