7 rupees

News @ your fingertips

ಚೆಕ್ ತ್ವರಿತ ವಿಲೇವಾರಿ ; ಹೊಸ ಕ್ರಮ

ಚೆಕ್‌ಗಳ ತ್ವರಿತ ವಿಲೇವಾರಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಿಟಿಎಸ್ ನೊಂದಿಗೆ ನೂತನ ವ್ಯವಸ್ಥೆಯು ಚಿತ್ರ ಮತ್ತು ಎಲೆಕ್ಟ್ರಾನಿಕ್ಸ್ ಸಿಗ್ನಲ್‌ಗಳನ್ನು ಆಧರಿಸಿ ಕಾರ್ಯ ನಿರ್ವಹಿಸಲಿದೆ. ಇನ್ನೂ ಮುಂದೆ ಚೆಕ್‌ಗಳ ಭೌತಿಕ ಬಳಕೆ ಕಡಿಮೆಯಾಗಲಿದೆ. ಈ ಬದಲಾವಣೆಗಳು ಚೆಕ್ ನಿರ್ವಹಣೆ ಕಾರ್ಯಯನ್ನು ತ್ವರಿತ ಹಾಗೂ ನಿರಂತರಗೊಳಿಸಲಿದೆ. ಕಡಿಮೆ ಅವಧಿಯಲ್ಲಿ ಚೆಕ್‌ಗಳು ಬ್ಯಾಂಕಿನಿಂದ ಬ್ಯಾಂಕ್‌ಗೆ ವರ್ಗಾವಣೆಯ ವ್ಯವಸ್ಧೆಯನ್ನು ಹೊಂದಲಿದ್ದು , ಖಾತೆಗಳಿಗೆ ತ್ವರಿತವಾಗಿ ಹಣ ಜಮಗೊಳ್ಳಲಿದೆ.
ಅಕ್ಟೋಬರ್ 4 ರಿಂದ ಬ್ಯಾಂಕುಗಳು ಚೆಕ್‌ಗಳ ಚಿತ್ರಗಳನ್ನು ಮತ್ತು ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಗ್ನಿಷನ್ ( ಎಂಐಸಿಆರ್) ಡೇಟಾವನ್ನು ಸ್ಕಾೃನ್ ಮಾಡಿ ಕ್ಲಿಯರಿಂಗ್ ಹೌಸ್‌ಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಳುಹಿಸುತ್ತವೆ. ಕ್ಲಿಯರಿಂಗ್ ಹೌಸ್ ಈ ಚಿತ್ರಗಳನ್ನು ದಿನವಿಡೀ ಪಾವತಿಸಬೇಕಾದ ಬ್ಯಾಂಕ್‌ಗೆ (ಡ್ರಾಯೀ ಬ್ಯಾಂಕ್) ರವಾನಿಸುತ್ತದೆ. ಹಾಗಾಗಿ ಇದು ಇನ್ನೂ ಚೆಕ್‌ನ್ನು ಭೌತಿಕವಾಗಿ ರವಾನಿಸುವ ಅಗತ್ಯವನ್ನು ನಿವಾರಿಸುತ್ತದೆ.ಜೊತೆಯಲ್ಲಿ ಬ್ಯಾಂಕ್‌ಗಳಿಗೆ ವೆಚ್ಚವನ್ನು ಉಳಿಸುತ್ತದೆ. ಹಣ ವರ್ಗಾವಣೆಯೂ ಬ್ಯಾಂಕಿನಿಂದ ಬ್ಯಾಂಕ್‌ಗೆ ತ್ವರಿತಗೊಳ್ಳಲಿದೆ.
ಸದ್ಯ ಸಿಟಿಎಸ್ ಮೂಲಕ ಚೆಕ್ ಕ್ಲಿಯರೆನ್ಸ್ ಬ್ಯಾಚ್ ಪ್ರೊಸೆಸಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

.