News @ your fingertips
News @ your fingertips
ಪೇಟಿಎಂ ಪೇಮೆಂಟ್ ಸರ್ವಿಸಸ್ ಲಿಮಿಟೆಡ್‌ಗೆ ಆನ್‌ಲೈನ್ ಪಾವತಿ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಾತ್ವಿಕ ಒಪ್ಪಿಗೆ ನೀಡಿದೆ.
ಪೇಟಿಎಂನ ಮಾತೃ ಸಂಸ್ಧೆ ವನ್ 97 ಕಮ್ಯುನಿಕೇಷನ್ ಲಿಮಿಟೆಡ್ ಈ ಕುರಿತ ಮಾಹಿತಿಯನ್ನು ಮಂಗಳವಾರ ಸ್ಟಾಕ್‌ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಪೇಟಿಎಂ ಇನ್ನೂ ಮುಂದಿನ ದಿನಗಳಲ್ಲಿ ಹೊಸ ಗ್ರಾಹಕರನ್ನು ಜೋಡಿಕೊಳ್ಳಲು ಇದು ಸಹಾಯಕವಾಗಲಿದೆ.
2022ನವೆಂಬರ್‌ನಿಂದ ಮರ್ಚಂಟ್ ಆನ್‌ಬೋಡಿಂಗ್ ಸೇವೆಯನ್ನು ಪೇಟಿಂಗ್‌ಗೆ ನಿರ್ಬಂಧಿಸಲಾಗಿತ್ತು.
ಈಗ ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಆನ್‌ಲೈನ್ ಪಾವತಿ ಸಂಗ್ರಾಹಕ ಕಾರ್ಯಾಚರಣೆಗಳಿಗೆ ಮಾತ್ರ ಅನ್ವಯಿಸುವ ಅಧಿಕಾರವು ಮುಂದಿನ ದಿನಗಳಲ್ಲಿ ಕಂಪನಿಯು ತನ್ನ ಡಿಜಿಟಲ್ ಪಾವತಿ ವ್ಯವಹಾರವನ್ನು ವಿಸ್ತರಿಸಲು ದಾರಿ ಮಾಡಿಕೊಡಲಿದೆ.
ಆದರೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪರಿಪಾಲಿಸುವಂತೆ ಸಂಸ್ಥೆಗೆ ಆರ್‌ಬಿಐ ಸೂಚಿಸಿದೆ.
ವನ್ 97 ಕಮ್ಯುನಿಕೇಷನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಪೇಟಿಎಂ 2024 ಸೆಪ್ಟಂಬರ್‌ರಲ್ಲಿ ಪಾವತಿ ಸಂಗ್ರಾಹಕ ಪರವಾನಿಗೆಗಾಗಿ ಮರು ಅರ್ಜಿ ಸಲ್ಲಿಸಿತ್ತು .
ಪಾವತಿ ಸಂಗ್ರಾಹಕ ಪರವಾನಿಗೆ ಸಂಸ್ಥೆಗೆ ಗ್ರಾಹಕರ ಪಾವತಿಗಳನ್ನು ಸಂಗ್ರಹಿಸಲು ಮತ್ತು ಇತ್ಯರ್ಥಪಡಿಸಲು ಅನುವು ಮಾಡಿಕೊಡುತ್ತದೆ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ