News @ your fingertips
News @ your fingertips
ಓಲಾ ಕ್ಯಾಬ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಭಕ್ಷಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಹಿಂದೂಸ್ತಾನ್ ಅನ್‌ಲೀವರ್ ಕಂಪೆನಿಯಲ್ಲಿದ್ದ ಹೇಮಂತ್ ಭಕ್ಷಿ ಮೂರು ತಿಂಗಳ ಹಿಂದೆಯಷ್ಟೇ ಓಲಾ ಕ್ಯಾಬ್ ಸೇರಿದ್ದರು.
ಇದೇ ಹೊತ್ತಿಗೆ ಓಲಾ ಕ್ಯಾಬ್ ಕಂಪೆನಿಯ ಪುನರ್‌ರಚನೆಯ ಮಾತುಗಳು ಕೇಳಿಬಂದಿವೆ. ಇದರಿಂದಾಗಿ ಸುಮಾರು ಶೇ.10ರಷ್ಟು ಸಿಬಂದಿಗಳನ್ನು ಉದ್ಯೋಗದಿಂದ ತೆಗೆಯುವ ನಿರ್ಧಾರಕ್ಕೆ ಬರಲಾಗಿದೆ.
ಸದ್ಯದಲ್ಲೇ ಕಂಪೆನಿಯ ಐಪಿಒ ಬಿಡುಗಡೆ ಮಾಡಲು ಸಿದ್ದತೆಗಳನ್ನು ನಡೆದಿವೆ. ಇದರ ಜೊತೆಯಲ್ಲಿ ಅಸ್ಟ್ರೇಲಿಯಾ,ಯುಕೆ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿನ ತನ್ನ ವಹಿವಾಟು ಮೊಟಕುಗೊಳಿಸಲು ನಿರ್ಧರಿಸಿದೆ.
ಓಲಾ ಕ್ಯಾಬ್‌ನ ಸಂಸ್ಥಾಪಕ ಭವೀಶ್ ಅಗರ್‌ವಾಲ್ ಸದ್ಯ ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿಇಒ ಆಯ್ಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ